Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಚಿಲಿಯಲ್ಲಿ ಬಲಪಂಥೀಯ ಅಲೆ: ನೂತನ ಅಧ್ಯಕ್ಷರಾಗಿ ಜೋಸ್ ಆಂಟೋನಿಯೊ ಕಾಸ್ಟ್ ಆಯ್ಕೆ
20 ಡಿಸೆಂಬರ್ 2025
* ದಕ್ಷಿಣ ಅಮೆರಿಕಾದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರವಾದ
ಚಿಲಿ (Chile)
ಒಂದು ಐತಿಹಾಸಿಕ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಡಿಸೆಂಬರ್ 14, 2025 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಎರಡನೇ ಹಂತದ (Run-off) ಮತದಾನದಲ್ಲಿ ರಿಪಬ್ಲಿಕನ್ ಪಕ್ಷದ ನಾಯಕ
ಜೋಸ್ ಆಂಟೋನಿಯೊ ಕಾಸ್ಟ್ (Jose Antonio Kast)
ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಇದು ಕಳೆದ 35 ವರ್ಷಗಳ ಚಿಲಿ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತ್ಯಂತ ಬಲಪಂಥೀಯ ಸರ್ಕಾರ ಅಸ್ತಿತ್ವಕ್ಕೆ ಬರಲಿರುವುದನ್ನು ಸೂಚಿಸುತ್ತದೆ.
* ಚುನಾವಣಾ ಫಲಿತಾಂಶಗಳ ಪ್ರಕಾರ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ
ಜೋಸ್ ಆಂಟೋನಿಯೊ ಕಾಸ್ಟ್
ಅವರು ಶೇ. 58.1% ಮತಗಳನ್ನು ಪಡೆದು ವಿಜಯ ಸಾಧಿಸಿದ್ದು, ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ
ಜೀನೆಟ್ ಜಾರಾ
ಶೇ. 41.9% ಮತಗಳೊಂದಿಗೆ ಪರಾಭವಗೊಂಡಿದ್ದಾರೆ; ಈ ಮೂಲಕ ಕಾಸ್ಟ್ ಅವರು ಮಾರ್ಚ್ 11, 2026ರಂದು
ಚಿಲಿ
ಯ 38ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
* ಈ ಬಾರಿಯ ಚುನಾವಣೆ ಅತ್ಯಂತ ಧ್ರುವೀಕರಣದಿಂದ ಕೂಡಿದ್ದು, ಮತದಾರರು ಕಾಸ್ಟ್ ಅವರ ಪರವಾಗಿ ನಿಲ್ಲಲು ಪ್ರಮುಖ ಕಾರಣಗಳಾಗಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು
ಕಠಿಣ ಕಾನೂನು ಮತ್ತು ಭದ್ರತಾ ನೀತಿ
ಗಳ ಭರವಸೆ, ಅಕ್ರಮ ವಲಸೆಯನ್ನು ತಡೆಯಲು ವಲಸಿಗರ ಗಡೀಪಾರು ಹಾಗೂ ಗಡಿ ಭದ್ರತೆಯನ್ನು ಬಲಪಡಿಸುವ
ಕಟ್ಟುನಿಟ್ಟಿನ ನಿಲುವು
, ಜೊತೆಗೆ ಆರ್ಥಿಕ ನಿಶ್ಚಲತೆಯನ್ನು ದೂರ ಮಾಡಲು ತೆರಿಗೆ ಕಡಿತ ಮತ್ತು ಮುಕ್ತ ಮಾರುಕಟ್ಟೆ ಆಧಾರಿತ
ಆರ್ಥಿಕ ಸುಧಾರಣೆಗಳ ಘೋಷಣೆ
ಗಳು ಪ್ರಮುಖವಾಗಿಮಾಡಿವೆ.
* ರಾಜಕೀಯವಾಗಿ ಈ ಫಲಿತಾಂಶವು ಮಹತ್ವದ್ದಾಗಿದ್ದು, 2010ರಿಂದ ಚಿಲಿಯಲ್ಲಿ ಎಡ ಮತ್ತು ಬಲಪಂಥೀಯ ಸರ್ಕಾರಗಳು ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿದ್ದ ಪರಿಸ್ಥಿತಿಯಲ್ಲಿ ಕಾಸ್ಟ್ ಅವರ ಜಯವು ಕೇವಲ ಆಡಳಿತ ಬದಲಾವಣೆ ಮಾತ್ರವಲ್ಲದೆ ದೇಶದ ಮೂಲಭೂತ ನೀತಿಗಳಲ್ಲೇ ದೊಡ್ಡ ತಿರುವು ಸೂಚಿಸುತ್ತದೆ; ಜೊತೆಗೆ
ಅರ್ಜೆಂಟೀನಾ
ಮತ್ತು
ಈಕ್ವೆಡಾರ್
ನಂತರ
ಚಿಲಿ
ಯಲ್ಲೂ ಬಲಪಂಥೀಯ ನಾಯಕತ್ವ ಅಧಿಕಾರಕ್ಕೆ ಬಂದಿರುವುದು, ಇಡೀ ಲ್ಯಾಟಿನ್ ಅಮೆರಿಕಾ ಪ್ರದೇಶದಲ್ಲಿ ರಾಜಕೀಯ ದಿಕ್ಕು ಬದಲಾಗುತ್ತಿರುವ ಪ್ರವೃತ್ತಿಯನ್ನು ಸ್ಪಷ್ಟಪಡಿಸುತ್ತದೆ.
*ಜೋಸ್ ಆಂಟೋನಿಯೊ ಕಾಸ್ಟ್ ಅವರ ಅಧ್ಯಕ್ಷೀಯ ಆಯ್ಕೆ ಚಿಲಿಯ ರಾಜಕೀಯ ಭವಿಷ್ಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ದೇಶದ ಒಳರಾಜಕೀಯ ಹಾಗೂ ಲ್ಯಾಟಿನ್ ಅಮೆರಿಕದ ರಾಜಕೀಯ ಪರಿಸರದ ಮೇಲೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.
Take Quiz
Loading...