* ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಶೀಘ್ರದಲ್ಲೇ ಲೋಕಾರ್ಪಣೆಯಾಗುತ್ತಿದೆ.* ಸುಮಾರು 6,50,000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ.* 2023ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಭಾರತದಲ್ಲೇ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು.ಇದರ ಬೋಧನಾ ಆಸ್ಪತ್ರೆ ಈ ನವೆಂಬರ್ನಲ್ಲಿ 600 ಹಾಸಿಗೆಗಳ ಅತ್ಯಾಧುನಿಕ ಉಚಿತ ಆಸ್ಪತ್ರೆಯಾಗಿ ವಿಸ್ತರಿಸಲ್ಪಡುತ್ತಿದೆ.* ಆಸ್ಪತ್ರೆಯಲ್ಲಿ 100 ಐಸಿಯು ಬೆಡ್ಗಳು, 11 ಆಪರೇಷನ್ ಥಿಯೇಟರ್ಗಳು ಇದ್ದು, ಯಾವುದೇ ಬಿಲ್ಲಿಂಗ್ ಕೌಂಟರ್ ಇಲ್ಲ. ಸಂಪೂರ್ಣ ಉಚಿತವಾಗಿ ಆರೋಗ್ಯ ಸೇವೆ ದೊರೆಯಲಿದೆ.* ಆಸ್ಪತ್ರೆಯ ಗೋಪುರದ ಮೇಲೆ 20 ಅಡಿ ಎತ್ತರದ ಶ್ರೀ ಧನ್ವಂತರಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಇದು ಕೇವಲ ಆಸ್ಪತ್ರೆಯಲ್ಲ, ಮಾನವೀಯತೆಗೆ ನೀಡಿದ "ಆರೋಗ್ಯವೇ ಹಕ್ಕು" ಎಂಬ ಭರವಸೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.