* ಚೀನಾಗೆ ಭಾರೀ ಹಿನ್ನಡೆ, ರೋಡ್‌ ಆ್ಯಂಡ್ ಬೆಲ್ಟ್‌ ಯೋಜನೆಯಿಂದ ಹೊರ ಬಂದ ಇಟಲಿ! Belt and Road: ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಬೆಲ್ಟ್ ಆ್ಯಂಡ್ ರೋಡ್ ಪ್ರಾಜೆಕ್ಟ್‌ನಿಂದ ಹೊರ ಬರುವ ಸುಳಿವು ನೀಡಿದ್ದರು.* ಇಟಲಿಯು ಚೀನಾದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆ ಒನ್ ಬೆಲ್‌ನಿಂದ ನಿರ್ಗಮಿಸಿದ್ದು, ಭಾರತದ ಸುತ್ತ ಆರ್ಥಿಕ ಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರಿ ಹೊಡೆತ ಬಿದ್ದಿದೆ. * ಈ ಯೋಜನೆಯು ಯೂರೋಪ್ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜಿವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ ಒಪ್ಪಂದಕ್ಕೆ ಕೈಜೋಡಿಸಿದ ಏಕೈಕ ಜಿ-7 ರಾಷ್ಟ್ರ ಇಟಲಿ ಮಾತ್ರವೇ ಆಗಿತ್ತು. * ಚೀನಾಗೆ ಹೋಗುತ್ತಿರುವ ಇಟಲಿಯ ರಫ್ತು ಪ್ರಮಾಣ 14.5 ಶತಕೋಟಿ ಯೂರೋಗಳಿಂದ 18.5 ಶತಕೋಟಿ ಯುರೋಗಳಿಗೆ ಏರಿಕೆಯಾದರೆ, ಚೀನಾದಿಂದ ಇಟಲಿಗೆ ಕಳುಹಿಸುತ್ತಿರುವ ರಫ್ತು ಪ್ರಮಾಣ ಮಾತ್ರ 33.5 ಶತಕೋಟಿ ಯುರೋಗಳಿಂದ 50.9 ಶತಕೋಟಿ ಯೂರೋಗಳಿಗೆ ಹೆಚ್ಚಾಗಿದೆ.