* ಚೀನಾ ಮೊದಲ ಬಾರಿಗೆ ವಿಶ್ವದ ‘10ಜಿ’ ವೇಗದ ಇಂಟರ್ನೆಟ್ ಸೇವೆಯನ್ನು ಆರಂಭಿಸಿದೆ. ಹುಯಾವೇ ಹಾಗೂ ಚೀನಾ ಯುನಿಕಾಮ್ ಸಂಸ್ಥೆಗಳು ಜಂಟಿಯಾಗಿ ಹೆಬ್ಬೆ ಪ್ರಾಂತ್ಯದಲ್ಲಿ ಈ ನವೀನ ನೆಟ್ವರ್ಕ್ ಅನ್ನು ಸ್ಥಾಪಿಸಿವೆ.* 50ಜಿ ಪಿಒಎನ್ ತಂತ್ರಜ್ಞಾನದ ನೆರವಿನಿಂದ ಕಾರ್ಯನಿರ್ವಹಿಸುವ ಈ ಸೇವೆಯು ಗಿಗಾಬೈಟ್ ಗಿಂತಲೂ ಹೆಚ್ಚಿನ ವೇಗವನ್ನು ಒದಗಿಸುತ್ತಿದ್ದು, ಸಾರ್ವಜನಿಕ ಉಪಯೋಗಕ್ಕಾಗಿ 10ಜಿ ಇಂಟರ್ನೆಟ್ ನೀಡಿದ ವಿಶ್ವದ ಪ್ರಥಮ ರಾಷ್ಟ್ರ ಎಂಬ ಬಿರುದನ್ನು ಚೀನಾ ಪಡೆದುಕೊಂಡಿದೆ.* "ಇದು ಇಂಟರ್ನೆಟ್ ಮೂಲಸೌಕರ್ಯದ ಬೆಳವಣಿಗೆಯಲ್ಲಿ ಮಹತ್ತರ ಮುನ್ನಡೆಯಾಗಿದೆ. ಹೆಬ್ಬೆ ಪ್ರಾಂತ್ಯವು ಈ ಸೇವೆಯ ಜಾರಿ ಮೂಲಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* 10ಜಿ ಇಂಟರ್ನೆಟ್ ಬಳಕೆದಾರರು ಎರಡು ಗಂಟೆಗಳ ಸಿನಿಮಾಗಳನ್ನು ಕೇವಲ ಕೆಲವು ಸೆಕೆಂಡುಗಳಲ್ಲಿ ಡೌನ್ಲೋಡ್ ಮಾಡುವಷ್ಟು ವೇಗ ಪಡೆಯುತ್ತಾರೆ.* ಪ್ರಯೋಗಾತ್ಮಕ ಹಂತದಲ್ಲಿ 10ಜಿ ಇಂಟರ್ನೆಟ್ ಸೇವೆಯ ಡೌನ್ಲೋಡ್ ವೇಗ ಪ್ರತಿ ಸೆಕೆಂಡಿಗೆ 9834 ಎಂಬಿ ದಾಖಲೆಯಾಗಿದ್ದು,* ಅಪ್ಲೋಡ್ ವೇಗವು ಪ್ರತಿ ಸೆಕೆಂಡಿಗೆ 1008 ಎಂಬಿ ತಲುಪಿದ ಮೂಲಕ ಹೊಸ ದಾಖಲೆ ನಿರ್ಮಿತವಾಗಿದೆ.