* ಚೀನಾದಲ್ಲಿ ಸತತ ಮೂರನೇ ವರ್ಷ ಜನಸಂಖ್ಯೆ ಕುಸಿತಗೊಂಡಿದ್ದು, ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಈ ಅಂತರ ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.* 2023ರಲ್ಲಿ 140.9 ಕೋಟಿಯ ಜನಸಂಖ್ಯೆಯಿಂದ 13 ಲಕ್ಷಜನರ ಇಳಿಕೆಯಾಗಿದೆಯೆಂದು ರಾಷ್ಟ್ರೀಯ ಅಂಕಿ-ಅಂಶಗಳ ಮಂಡಳಿ (NBS) ಹೇಳಿದೆ.* 2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಗಿದ್ದು, 2021 ಮತ್ತು 2022ರ ಅವಧಿಯಲ್ಲಿ 20.80 ಲಕ್ಷ ಜನರಷ್ಟು ಕಡಿಮೆಯಾಗಿತ್ತು.* ಚೀನಾದಲ್ಲಿ ವಯೋವೃದ್ಧ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲಸ ಮಾಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಗ್ರಾಹಕರ ಕೊರತೆ ಎದುರಿಸಬಹುದು ಎಂದು ತೋರುತ್ತದೆ.* ವೃದ್ಧರ ಆರೈಕೆ ಮತ್ತು ನಿವೃತ್ತಿ ನಂತರದ ಸೌಕರ್ಯಗಳ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ, ಈಗಾಗಲೇ ಒತ್ತಡದಲ್ಲಿರುವ ಸ್ಥಳೀಯ ಸರಕಾರಗಳಿಗೆ ಹೆಚ್ಚುವರಿ ಹೂಡಿಕೆ ಅವಶ್ಯಕತೆ ಇದೆ.* 1980 ರಿಂದ 2015 ರವರೆಗೆ ಜಾರಿಯಲ್ಲಿದ್ದ 'ಒಂದೇ ಮಗು ನೀತಿ' ಮತ್ತು ನಗರೀಕರಣದ ಪರಿಣಾಮವಾಗಿ, ಚೀನಾದಲ್ಲಿ ಜನನ ದರವು ದಶಕಗಳಿಂದ ಹೀನಾಯವಾಗಿ ಕುಸಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.