* ಚೀನಾದಲ್ಲಿ ವಿಶ್ವದ ಅತಿ ಎತ್ತರದ ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆ ಉದ್ಘಾಟನೆಯಾಗಿದೆ. ಬೀಪಾನ್ ನದಿಯಿಂದ 625 ಮೀಟರ್ ಎತ್ತರದಲ್ಲಿ ನಿರ್ಮಾಣವಾದ ಈ ಸೇತುವೆ ಸಂಚಾರಕ್ಕೆ ತೆರೆಯಲ್ಪಟ್ಟಿದೆ.* ಸುಮಾರು ಮೂರುವರೆ ವರ್ಷಗಳಲ್ಲಿ ನಿರ್ಮಿಸಿದ ಈ ಸೇತುವೆಯ ಉದ್ದ 2,890 ಮೀಟರ್ ಆಗಿದ್ದು, 1,420 ಮೀಟರ್ ಮುಖ್ಯ ಸ್ಪ್ಯಾನ್ ಹೊಂದಿದೆ.* ಇದು ವಿಶ್ವದ ಅತಿ ಎತ್ತರದ ಸೇತುವೆ ಹಾಗೂ ಪರ್ವತ ಪ್ರದೇಶದಲ್ಲಿ ಅತಿದೊಡ್ಡ ವಿಸ್ತಾರ ಹೊಂದಿದ ಸೇತುವೆ ಎಂಬ ಎರಡು ದಾಖಲೆಯನ್ನು ನಿರ್ಮಿಸಿದೆ.* ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಂದ ಕೇವಲ ಎರಡು ನಿಮಿಷಗಳಿಗೆ ಇಳಿಸುವ ಸಾಮರ್ಥ್ಯ ಹೊಂದಿರುವ ಈ ಸೇತುವೆ, ಗೈಝೌ ಪ್ರಾಂತ್ಯದ ಗುಡ್ಡಗಾಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರಾಂತ್ಯವೇ ಈಗಾಗಲೇ ತನ್ನ ಅದ್ಭುತ ಸೇತುವೆಗಳಿಗಾಗಿ ಪ್ರಸಿದ್ಧವಾಗಿದೆ.* ಚೀನಾ ಮೂಲಸೌಕರ್ಯ ಮತ್ತು ನಗರೀಕರಣದಲ್ಲಿ ಭಾರೀ ಹೂಡಿಕೆ ಮಾಡುತ್ತಿದ್ದು, ಇಂತಹ ಮೆಗಾ ಯೋಜನೆಗಳು ಅದರ ಆರ್ಥಿಕ ಬೆಳವಣಿಗೆಗೆ ಬಲ ತುಂಬುತ್ತವೆ.* ಹುವಾಜಿಯಾಂಗ್ ಸೇತುವೆಯಂತಹ ನಿರ್ಮಾಣಗಳು ದೂರದ ಪ್ರದೇಶಗಳನ್ನು ಸಂಪರ್ಕಿಸಿ ಅಭಿವೃದ್ಧಿಗೆ ದಾರಿ ತೆಗೆಯುತ್ತವೆ.