* ಶಾಂಘೈ ಸಹಕಾರ ಶೃಂಗಸಭೆ (SCO) ಚೀನಾದ ತಿಯಾನ್ಜಿನ್ನಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಚೀನಾ ನಾಯಕರೊಂದಿಗೆ ಮಾತುಕತೆ ನಡೆಸಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಸಮ್ಮುಖದಲ್ಲೇ ಭಯೋತ್ಪಾದನೆ ಮತ್ತು ಪಹಲ್ಲಾಮ್ ದಾಳಿ ವಿಷಯವನ್ನು ಪ್ರಸ್ತಾಪಿಸಿದರು. ಇದರಿಂದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಯಿತು.* 1996ರಲ್ಲಿ ಚೀನಾ, ರಷ್ಯಾ, ಕಝಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ ಸೇರಿ 'ಶಾಂಘೈ ಫೈವ್' ಎಂಬ ಹೆಸರಿನಲ್ಲಿ ಸಂಘಟನೆ ಆರಂಭವಾಯಿತು. 2001ರಲ್ಲಿ ಉಜ್ಬೆಕಿಸ್ತಾನ ಸೇರ್ಪಡೆಗೊಂಡ ನಂತರ ಶಾಂಘೈ ಸಹಕಾರ ಸಂಘಟನೆ (SCO) ಎಂದು ರೂಪುಗೊಂಡಿತು.* 2017ರಲ್ಲಿ ಭಾರತ ಮತ್ತು ಪಾಕಿಸ್ತಾನ ಸದಸ್ಯರಾದರೆ, 2023ರಲ್ಲಿ ಇರಾನ್ ಮತ್ತು 2024ರಲ್ಲಿ ಬೆಲಾರಸ್ ಸೇರ್ಪಡೆಗೊಂಡವು.* ಪ್ರಸ್ತುತ SCOಗೆ 10 ಸದಸ್ಯ ರಾಷ್ಟ್ರಗಳು, 2 ವೀಕ್ಷಕ ರಾಷ್ಟ್ರಗಳು ಹಾಗೂ 14 ಸಂವಾದ ಪಾಲುದಾರ ರಾಷ್ಟ್ರಗಳಿವೆ. ಸದಸ್ಯತ್ವ ಪಡೆಯಲು ಭೌಗೋಳಿಕ ಸಂಪರ್ಕ, ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧ ಅಗತ್ಯ. ಭಾರತವು ವೀಕ್ಷಕ ಸ್ಥಾನದಿಂದ 2017ರಲ್ಲಿ ಪೂರ್ಣ ಸದಸ್ಯತ್ವ ಪಡೆದಿತು.* SCO ಜಗತ್ತಿನ ಶೇ.24ರಷ್ಟು ಭೂಪ್ರದೇಶ, ಶೇ.42 ಜನಸಂಖ್ಯೆ ಹಾಗೂ ಶೇ.20ಕ್ಕೂ ಅಧಿಕ ಜಾಗತಿಕ ಜಿಡಿಪಿಯನ್ನು ಪ್ರತಿನಿಧಿಸುತ್ತದೆ.* ಭಯೋತ್ಪಾದನೆ, ಉಗ್ರವಾದ, ಪ್ರತ್ಯೇಕತಾವಾದ ವಿರುದ್ಧ ಹೋರಾಟ ಅದರ ಪ್ರಮುಖ ಗುರಿ. ಇದಕ್ಕಾಗಿ ಪ್ರಾದೇಶಿಕ ಭಯೋತ್ಪಾದನಾ-ವಿರೋಧಿ ವಿಭಾಗವನ್ನೂ ಹೊಂದಿದೆ.* ಎಸ್ಸಿಒವನ್ನು ನ್ಯಾಟೊ ಮತ್ತು ಯುರೋಪಿಯನ್ ಯೂನಿಯನ್ಗೆ ಪ್ರಬಲ ಪರ್ಯಾಯವೆಂದು ಪರಿಗಣಿಸಲಾಗುತ್ತಿದೆ. ಸಾರ್ಕ್ ತನ್ನ ಪ್ರಭಾವ ಕಳೆದುಕೊಂಡಿರುವ ಸಮಯದಲ್ಲಿ, ಬ್ರಿಕ್ಸ್ ಅಮೆರಿಕಕ್ಕೆ ಸವಾಲು ನೀಡುತ್ತಿದ್ದರೆ, ಎಸ್ಸಿಒ ಪ್ರಾದೇಶಿಕ ಭದ್ರತೆ ಹಾಗೂ ಸಹಕಾರಕ್ಕೆ ಬಲ ನೀಡುತ್ತಿದೆ.