* ಚೀನಾದ ಕಿನ್ ಹೈಯಾಂಗ್ ಅವರು ಪುರುಷರ 200 ಮೀಟರ್ ಬ್ರೆಸ್ಟ್ಸ್ಟ್ರೋಕ್ನಲ್ಲಿ 2:07.41 ಸಮಯದಲ್ಲಿ ಚಿನ್ನ ಗೆದ್ದರು. ಈ ಹಿಂದೆ ಅವರು 100 ಮೀ. ಬ್ರೆಸ್ಟ್ಸ್ಟ್ರೋಕ್ ಕೂಡ ಜಯಿಸಿದ್ದರು. 2023ರಲ್ಲಿ ಹೈಯಾಂಗ್ ವಿಶ್ವದಾಖಲೆಯೊಂದಿಗೆ (2:05.48) ಜಯಿಸಿದ್ದರು.* ನೆದರ್ಲೆಂಡ್ಸ್ನ ಮ್ಯಾರಿಟ್ ಸ್ಟೀನ್ಬರ್ಗೆನ್ ಮಹಿಳೆಯರ 100 ಮೀ. ಫ್ರೀಸ್ಟೈಲ್ನಲ್ಲಿ 52.55 ಸೆಕೆಂಡ್ಗಳಲ್ಲಿ ಗೆದ್ದರು. ಆಸ್ಟ್ರೇಲಿಯಾದ ಮೋಲಿ ಓ’ಕ್ಯಾಲಗನ್ (52.67) ಬೆಳ್ಳಿ ಮತ್ತು ಅಮೆರಿಕದ ಟೊರಿ ಹಸ್ಕೆ (52.89) ಕಂಚು ಪಡೆದರು.* ಹಂಗೇರಿಯ ಹ್ಯೂಬರ್ಟ್ ಕೋಸ್ ಪುರುಷರ 200 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ 1:53.19 ಸಮಯದಲ್ಲಿ ಚಿನ್ನ ಗೆದ್ದರು. ದ.ಆಫ್ರಿಕಾದ ಪೀಟರ್ ಕೋಟ್ಜೆ ಬೆಳ್ಳಿ ಮತ್ತು ಫ್ರಾನ್ಸ್ನ ಯೋಹಾನ್ ಬ್ರೌರ್ಡ್ ಕಂಚು ಪಡೆದರು.* ಅಮೆರಿಕದ ಕೇಟ್ ಡಗ್ಲಸ್ ಮಹಿಳೆಯರ 200 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ 2:18.50 ಸಮಯದೊಂದಿಗೆ ಚಾಂಪಿಯನ್ಷಿಪ್ ದಾಖಲೆ ನಿರ್ಮಿಸಿ ಚಿನ್ನ ಪಡೆದರು. ರಷ್ಯಾದ ಚಿಕುನೋವಾ ಬೆಳ್ಳಿ ಮತ್ತು ದ.ಆಫ್ರಿಕಾದ ಕಾರ್ಬೆಟ್ ಕಂಚು ಜಯಿಸಿದರು.* ಪುರುಷರ 4x200 ಮೀ. ಫ್ರೀಸ್ಟೈಲ್ ರಿಲೆಯಲ್ಲಿ ಬ್ರಿಟನ್ ಚಿನ್ನ, ಚೀನಾ ಬೆಳ್ಳಿ, ಆಸ್ಟ್ರೇಲಿಯಾ ಕಂಚು ಪಡೆದವು.* ಶನಿವಾರ 800 ಮೀ. ಫ್ರೀಸ್ಟೈಲ್ನಲ್ಲಿ ಸಮ್ಮರ್ ಮೆಕಿಂಟೋಷ್ ಮತ್ತು ಕೇಟಿ ಲೆಡೆಕಿ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಲೆಡೆಕಿ ಈ ಸ್ಪರ್ಧೆಯ ವಿಶ್ವದಾಖಲೆದಾರಿ ಮೆಕಿಂಟೋಷ್ ಈಗಾಗಲೇ ಮೂರು ಚಿನ್ನ ಗೆದ್ದಿದ್ದು, ಐದು ಚಿನ್ನ ಗುರಿಯಾಗಿದ್ದಾರೆ.