* ಜಮ್ಮುವಿನಿಂದ ಕಾಶ್ಮೀರವನ್ನು ಸಂಪರ್ಕಿಸುವ ಯುಎಸ್ಬಿಆರ್ಎಲ್ (Udhampur-Srinagar-Baramulla Rail Link) ರೈಲು ಮಾರ್ಗ ಲೋಕಾರ್ಪಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.* ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರಯಾಣದಲ್ಲಿ ಹೊಸ ಅನುಕೂಲತೆಯನ್ನು ಒದಗಿಸಲಿದೆ. ಇದರೊಂದಿಗೆ ಕಾಶ್ಮೀರವನ್ನು ಉಳಿದ ಭಾರತದೊಂದಿಗೆ ಬೆಸೆಯುವ ಪ್ರಮುಖ ಸಂಪರ್ಕ ಕೊಂಡಿಯಾಗಿ ಈ ರೈಲು ಮಾರ್ಗ ಪರಿಣಮಿಸಲಿದೆ.* ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 19ರಂದು ಈ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅವರು ಕಾತ್ರಾದಿಂದ ಕಾಶ್ಮೀರದ ಸಂಗಲ್ದಾನ್ ವಿಭಾಗದವರೆಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಉದ್ಘಾಟನೆ ನಡೆಸಲಿದ್ದಾರೆ.* ಈ ಪ್ರಯುಕ್ತ ವಿಶೇಷ ವಂದೇ ಭಾರತ್ ರೈಲು ಕಾತ್ರಾದ ಶ್ರೀ ಮಾತಾ ವೈಷ್ಣೋದೇವಿ ನಿಲ್ದಾಣದಿಂದ ಬುದ್ಗಾಮ್ ರೈಲ್ವೆ ನಿಲ್ದಾಣದವರೆಗೆ ಯಶಸ್ವಿಯಾಗಿ ಪ್ರಯೋಗಾರ್ಥ ಸಂಚಾರಿ ಕಾರ್ಯವನ್ನು ಪೂರ್ಣಗೊಳಿಸಿದೆ. ಇದು ಎರಡನೇ ಪ್ರಯೋಗಾರ್ಥ ಪ್ರಯಾಣವಾಗಿದ್ದು, ಯಾವುದೇ ತೊಂದರೆ ಇಲ್ಲದೇ ಚೀನಾಬ್ ಮತ್ತು ಅಂಜಿ-ಖಾಡ್ ಸೇತುವೆಗಳನ್ನು ದಾಟಿತು.* ಚೀನಾಬ್ ರೈಲು ಸೇತುವೆಯು ಪ್ರಪಂಚದ ಅತಿ ಎತ್ತರದ ರೈಲು ಸೇತುವೆ ಎನ್ನಲ್ಪಡುತ್ತಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಸಿಗುತ್ತಿರುವ ಈ ವಂದೇ ಭಾರತ್ ರೈಲು ಪ್ರದೇಶದ ಹವಾಮಾನವನ್ನು ಮನದಲ್ಲಿ ಇಟ್ಟುಕೊಂಡು ವಿಶೇಷ ರೀತಿಯಲ್ಲಿ ರೂಪುಗೊಂಡಿದೆ.* ದೇಶದ 136 ವಂದೇ ಭಾರತ್ ರೈಲಿಗಳಲ್ಲಿ ಈ ರೈಲು ವಿಭಿನ್ನ ಬಣ್ಣ ಮತ್ತು ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವುದು ವಿಶೇಷ. ಈ ಬೃಹತ್ ಯೋಜನೆಯು ಭಾರತದ ಎಂಜಿನಿಯರಿಂಗ್ ಕೌಶಲ್ಯವನ್ನು ತೋರಿಸುವ ಅದ್ಭುತ ಉದಾಹರಣೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.