* ಭಾರತವು ಚೀನಾದ ನಂತರ ಪೈಲಟ್ಗಳಿಗೆ ಎಲೆಕ್ಟ್ರಾನಿಕ್ ಸಿಬ್ಬಂದಿ ಪರವಾನಗಿ (ಇಪಿಎಲ್) ಪರಿಚಯಿಸಿದ ವಿಶ್ವದ ಎರಡನೇ ರಾಷ್ಟ್ರವಾಗಿದೆ. ಈ ವ್ಯವಸ್ಥೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಉದ್ಘಾಟಿಸಿದ್ದು, ಇದು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆಯಾಗಿದೆ.* EPL ಪೈಲಟ್ ಪರವಾನಗಿಯ ಡಿಜಿಟಲ್ ರೂಪವಾಗಿದ್ದು, eGCA ಅಪ್ಲಿಕೇಶನ್ ಮೂಲಕ ಭೌತಿಕ ಕಾರ್ಡ್ಗಳ ಬದಲಾವಣೆಯಾಗಿದೆ.* ಇದು 'ಸುಲಭ ವ್ಯವಹಾರ' ಮತ್ತು 'ಡಿಜಿಟಲ್ ಇಂಡಿಯಾ' ಉದ್ದೇಶಗಳಿಗೆ ಅನುಗುಣವಾಗಿ ಪರವಾನಗಿ ಪ್ರಕ್ರಿಯೆಯ ಪಾರದರ್ಶಕತೆ, ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ.* ಭಾರತದ ವಾಯುಯಾನ ಉದ್ಯಮದ ವೇಗದ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಸುಮಾರು 20,000 ಪೈಲಟ್ಗಳ ಅವಶ್ಯಕತೆ ಉಂಟಾಗಲಿದೆ ಎಂದು ನಾಯ್ಡು ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.* ಇಪಿಎಲ್ ಮತ್ತು ಇಜಿಸಿಎ ಮೂಲಕ ಪೈಲಟ್ಗಳಿಗೆ ಜಾಗತಿಕ ಮಾನ್ಯತೆಯ ಉದ್ಯೋಗಾವಕಾಶ ಹಾಗೂ ಸುರಕ್ಷತೆ ಒದಗಿಸಲಾಗುತ್ತಿದೆ ಎಂದರು.* ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ತಿದ್ದುಪಡಿಯ ನಂತರ, ಸದಸ್ಯ ರಾಷ್ಟ್ರಗಳನ್ನು ಎಲೆಕ್ಟ್ರಾನಿಕ್ ಪರವಾನಗಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಪ್ರಮುಖ ಜಾಗತಿಕ ಮಾರುಕಟ್ಟೆಗಳು ಡಿಜಿಟಲ್ ಪರವಾನಗಿ ವ್ಯವಸ್ಥೆಗಳಿಗೆ ಕ್ರಮವಹಿಸುತ್ತಿರುವಾಗ, ಭಾರತ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.* ಡಿಜಿಸಿಎ ಇಪಿಎಲ್ (ಇಲೆಕ್ಟ್ರಾನಿಕ್ ಪೈಲಟ್ ಲೈಸೆನ್ಸ್) ಅಳವಡಿಕೆಯಿಂದ ಪೈಲಟ್ ಪರವಾನಗಿಗಳ ಮುದ್ರಿತ ಕಾರ್ಡ್ ಬಳಕೆಯನ್ನು ನಿಲ್ಲಿಸುವ ಮೂಲಕ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಹಾಗೂ ಪರಿಸರದ ಮೇಲೆ ಪರಿಣಾಮವನ್ನು ಕಡಿಮೆ ಮಾಡುತ್ತದೆ.* 2024ರಲ್ಲಿ ಮಾತ್ರ 20,000 ಪರವಾನಗಿಗಳನ್ನು ನೀಡಲಾಗಿದೆ. ಇಪಿಎಲ್ನೊಂದಿಗೆ ಟ್ಯಾಂಪರ್-ಪ್ರೂಫ್, ಪಾರದರ್ಶಕ ವ್ಯವಸ್ಥೆಯು ಭಾರತವನ್ನು ವಿಶ್ವ ವಾಯುಯಾನ ನಾವೀನ್ಯತೆಯಲ್ಲಿ ಮುಂದಿರಿಸುತ್ತದೆ.* ಇಜಿಸಿಎ ವೇದಿಕೆ, ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಹಾಗೂ ಇಎಫ್ಎಫ್ನಂತಹ ಡಿಜಿಟಲ್ ತಂತ್ರಜ್ಞಾನಗಳು ದೇಶದ ವಾಯುಯಾನ ಕ್ಷೇತ್ರದ ದಕ್ಷತೆಯನ್ನು ಹೆಚ್ಚಿಸುತ್ತವೆ.