* ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿ ಅಭಿಯಾನ ಮುಗಿಸಿದರು.* ಫೈನಲ್ನಲ್ಲಿ ಅವರು ದಕ್ಷಿಣ ಕೊರಿಯಾದ ಅಗ್ರ ಜೋಡಿ ಕಿಮ್ ವಾನ್ ಹೋ ಮತ್ತು ಸಿಯೋ ಸೆಯುಂಗ್ ಜೇ ವಿರುದ್ಧ 19-21, 15-21 ಅಂಕಗಳಿಂದ ಸೋತರು.* ಸಾತ್ವಿಕ್–ಚಿರಾಗ್ ಇತ್ತೀಚೆಗೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಮತ್ತು ಹಾಂಗ್ ಕಾಂಗ್ ಓಪನ್ನಲ್ಲಿ ರನ್ನರ್ಸ್ ಅಪ್ ಪಟ್ಟ ಪಡೆದಿದ್ದರು. ಈ ಬಾರಿ ಅವರು ಫೈನಲ್ಗೆ ಒಂದೂ ಗೇಮ್ ಬಿಟ್ಟುಕೊಡದೆ ತಲುಪಿ, ಪ್ರಶಸ್ತಿಯ ನಿರೀಕ್ಷೆ ಮೂಡಿಸಿದ್ದರು.* ಮೊದಲ ಗೇಮ್ನಲ್ಲಿ ಭಾರತ ಜೋಡಿ 14–7 ಮುನ್ನಡೆ ಸಾಧಿಸಿದ್ದರೂ, ತಪ್ಪುಗಳಿಂದ ಕೊರಿಯಾ ಜೋಡಿ ಮತ್ತೆ ಹಿಡಿತ ಸಾಧಿಸಿತು. ಕೊನೆಯಲ್ಲಿ ಕಿಮ್–ಸಿಯೋ 21-19ರಿಂದ ಜಯಿಸಿದರು.* ಎರಡನೇ ಗೇಮ್ ಸಮಬಲ ಹೋರಾಟದಿಂದ ಆರಂಭವಾದರೂ, ಸಿಯೋ ಅವರ ರಕ್ಷಣಾತ್ಮಕ ಆಟ ಹಾಗೂ ಆಕರ್ಷಕ ಡ್ರಾಪ್ ಶಾಟ್ಗಳಿಂದ ಕೊರಿಯಾ ಜೋಡಿ ಮೇಲುಗೈ ಸಾಧಿಸಿ 45 ನಿಮಿಷಗಳಲ್ಲಿ ನೇರ ಗೇಮ್ಗಳಿಂದ ಪ್ರಶಸ್ತಿ ಗೆದ್ದಿತು.