* ಚೀನಾ ಸೆಪ್ಟೆಂಬರ್ 3ರಂದು ದ್ವಿತೀಯ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧದ ಜಯದ 80ನೇ ವಿಜಯೋತ್ಸವ ಸಂಸ್ಮರಣಾ ದಿನಾಚರಣೆಯನ್ನು ಬೀಜಿಂಗ್ನಲ್ಲಿ ಆಯೋಜಿಸುತ್ತಿದೆ. * ಈ ಸಂದರ್ಭದಲ್ಲಿ ನಡೆಯುವ ಪಥಸಂಚಲನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಸೇರಿದಂತೆ 26 ರಾಷ್ಟ್ರಗಳ ನಾಯಕರು ಆಗಮಿಸಲಿದ್ದಾರೆ.* ಜಪಾನ್ ಈ ಆಚರಣೆಯಿಂದ ಅಂತರ ಕಾಯ್ದುಕೊಳ್ಳುವಂತೆ ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದರೂ, ಚೀನಾ ಅದನ್ನು ತೀವ್ರವಾಗಿ ವಿರೋಧಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಈ ಸಮಾರಂಭಕ್ಕೆ ವಿವಿಧ ರಾಷ್ಟ್ರಾಧ್ಯಕ್ಷರು ಭಾಗಿಯಾಗಲಿದ್ದಾರೆ.* ಇದೇ ವೇಳೆ, ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಟಿಯಾನ್ಜಿನ್ನಲ್ಲಿ ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಶೃಂಗಸಭೆ ನಡೆಯಲಿದೆ.* ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಸೇರಿದಂತೆ 20 ದೇಶಗಳ ನಾಯಕರು ಹಾಗೂ 10 ಜಾಗತಿಕ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ.* ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮಹಮದ್ ಮುಯಿಝು ಸೇರಿದಂತೆ ಹಲವಾರು ನಾಯಕರು ಶೃಂಗಸಭೆಯ ಜೊತೆಗೆ ವಿಜಯೋತ್ಸವ ಪಥಸಂಚಲನದಲ್ಲೂ ಹಾಜರಾಗುವ ನಿರೀಕ್ಷೆಯಿದೆ.