* ಛತ್ತೀಸಗಢದ ಪ್ರಸಿದ್ಧ ಸಣ್ಣ ಕಥೆಗಾರ ವಿನೋದ್ ಕುಮಾರ್ ಶುಕ್ಲಾ ಅವರು 59ನೇ ಜ್ಞಾನಪೀಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯನ್ನು ಛತ್ತೀಸಗಢ ರಾಜ್ಯದವರು ಮೊದಲ ಬಾರಿಗೆ ಪಡೆದಿದ್ದಾರೆ.* ಹಿಂದಿ ಭಾಷೆಯ 88 ವರ್ಷದ ಸಮಕಾಲೀನ ಬರಹಗಾರ ವಿನೋದ್ ಸಾಹಿತ್ಯ ಪ್ರಕಾರಗಳಲ್ಲಿ, ಸಣ್ಣ ಕಥೆಗಳು, ಕವಿತೆ, ಮತ್ತು ಪ್ರಬಂಧಗಳಲ್ಲಿ ತನ್ನ ಸಾಹಿತ್ಯವನ್ನು ರಚಿಸಿದ್ದಾರೆ.* ಹಿಂದಿ ಭಾಷೆಗೆ ಇದು 12ನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದು, ₹11 ಲಕ್ಷ ನಗದು ಬಹುಮಾನ ಮತ್ತು ಸರಸ್ವತಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ.* ‘ಹಿಂದಿ ಸಾಹಿತ್ಯಕ್ಕೆ ವಿನೋದ್ ಅವರ ಕೊಡುಗೆಗಳನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಥೆಗಾರ್ತಿ ಪ್ರತಿಭಾ ರಾಯ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ವಿನೋದ್ ಅವರನ್ನು ಆಯ್ಕೆ ಮಾಡಿದೆ.* ಸಾಹಿತ್ಯ, ಕ್ರಿಯಾತ್ಮಕತೆ ಮತ್ತು ವಿಶಿಷ್ಟವಾದ ಬರಹ ಶೈಲಿಗಾಗಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಸಮಿತಿ ಹೇಳಿದೆ.ವಿನೋದ್ ಅವರ ಪ್ರಮುಖ ಕೃತಿಗಳು:* ಹಿಂದಿ ಸಾಹಿತ್ಯಗಾರ ವಿನೋದ್ ಕುಮಾರ್ ಶುಕ್ಲಾ ಅವರು ‘ದಿವಾರ್ ಮೇ ಏಕ್ ಖಿಡಕಿ ರಹತೀ ಥಿ’ ಕೃತಿಗೆ 1999ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಅವರ ಪ್ರಮುಖ ಕೃತಿಗಳಲ್ಲಿ ‘ನೌಕರ್ ಕಿ ಕಮೀಜ್’ (1979) ಮತ್ತು ‘ಸಬ್ ಕುಚ್ ಹೋನಾ ಬಚಾ ರಹೇಗಾ’ (1992) ಸೇರಿವೆ. ಪ್ರಶಸ್ತಿಗಳ ಬಗ್ಗೆ ಅವರು ಹೆಚ್ಚು ಚಿಂತಿಸುವವರಲ್ಲ, ಆದರೆ ಜ್ಞಾನಪೀಠಕ್ಕೆ ಅರ್ಹನಾಗಿದ್ದೇನೆ ಎನ್ನುವ ಸ್ನೇಹಿತರ ಮಾತುಗಳು ಅವರನ್ನು ಹಿಂಜರಿಕೆ ಮಾಡುತ್ತಿದ್ದವು.* ಬರವಣಿಗೆ ಚಿಕ್ಕ ಕಾರ್ಯವಲ್ಲ, ನಿರಂತರ ಬರೆಯಬೇಕು ಮತ್ತು ವಿಮರ್ಶೆಗಳನ್ನು ಗಮನಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.