* ಛತ್ತೀಸ್ಗಢದ ಬಿಜಾಪುರ(Bijapur Encounter) ಜಿಲ್ಲೆಯಲ್ಲಿ ಭಾನುವಾರ(ಫೆಬ್ರವರಿ 9) ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ 31 ನಕ್ಸಲರು ಬಲಿಯಾಗಿದ್ದಾರೆ. ಕಾರ್ಯಾಚರಣೆ ಸಮಯದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.* ಭಾನುವಾರ ಬೆಳಗ್ಗೆ ಮಹಾರಾಷ್ಟ್ರ ಗಡಿಯಲ್ಲಿ ಇರುವ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ವೇಳೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲಿಗಳ ನಡುವೆ ಎನ್ಕೌಂಟರ್ ನಡೆದಿದೆ ಎಂದು ಐಜಿ ಪಿ ಸುಂದರರಾಜ್ ತಿಳಿಸಿದ್ದಾರೆ.* ಘಟನಾ ಸ್ಥಳದಿಂದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.* 31 ನಕ್ಸಲರ ಸಾವಿನ ಮೂಲಕ ಈ ವರ್ಷ ಗುಂಡಿನ ದಾಳಿಗೆ ಬಲಿಯಾದ ನಕ್ಸಲರ ಸಂಖ್ಯೆ 81 ಕ್ಕೆ ತಲುಪಿದೆ.* ಕಳೆದ ವರ್ಷ ರಾಜ್ಯದಲ್ಲಿ 219 ಮಂದಿ ನಕ್ಸಲರು ಹತರಾಗಿದ್ದು, ಅಕ್ಟೋಬರ್ 4ರಂದು ಬಸ್ತರ್ ವಲಯದ ಅಬೂಝ್ಮಾಢ್ ಬಳಿ ನಡೆದ ಗುಂಡಿ ಚಕಮಕಿಯಲ್ಲಿ 38 ಮಂದಿ ಮೃತಪಟ್ಟಿದ್ದರು.