* ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ನ್ಯೂಜಿಲೆಂಡ್ ಪ್ರಬಲ ಗೆಲುವು ಸಾಧಿಸಿದ್ದು, ಫೈನಲ್ನಲ್ಲಿ ಭಾರತದ ವಿರುದ್ಧ ಪೈಪೋಟಿ ನಡೆಸಲಿದೆ.* ನ್ಯೂಜಿಲೆಂಡ್ ಗಡ್ಡಾಫಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ 6 ವಿಕೆಟ್ಗೆ 362 ರನ್ ಗಳಿಸಿ ಟೂರ್ನಿಯ ಗರಿಷ್ಠ ಮೊತ್ತ ದಾಖಲಿಸಿತು. ದಕ್ಷಿಣ ಆಫ್ರಿಕಾ 9 ವಿಕೆಟ್ಗೆ 312 ರನ್ ಗಳಿಸಿ ಸೋತರೂ ಡೇವಿಡ್ ಮಿಲ್ಲರ್ ಅಜೇಯ ಶತಕ (100*, 67ಎ) ಹೊಡೆದು ತಂಡದ ಗೌರವ ಉಳಿಸಿದರು.* ನ್ಯೂಜಿಲೆಂಡ್ ಪರ ಮಿಚೆಸ್ ಸ್ಯಾಂಥ್ನರ್ 3 ವಿಕೆಟ್ ಪಡೆದರೆ, ಗ್ಲೇನ್ ಫಿಲಿಪ್ಸ್, ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಪಡೆದರೆ, ಬ್ರೇಸ್ ವೆಲ್, ರಚಿನ್ ರವೀಂದ್ರ ತಲಾ 1 ವಿಕೆಟ್ ಪಡೆದರು.* ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಕೇವಲ 101 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ 108 ಪೇರಿಸಿದರೆ, 94 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ 2 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 102 ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ಡರಿಲ್ ಮಿಚೆಲ್ (49 ರನ್) ಮತ್ತು ಗ್ಲೆನ್ ಫಿಲಿಪ್ಸ್ (ಅಜೇಯ 49 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಕಿವೀಸ್ ಮೊತ್ತ 350ರ ಗಡಿ ದಾಟುವಂತೆ ನೋಡಿಕೊಂಡರು.* ವಿಲಿಯಮ್ಸನ್ ಏಕದಿನ ಪಂದ್ಯಗಳಲ್ಲಿ ತಮ್ಮ 15ನೇ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಇದು ಅವರ ಸತತ ಮೂರನೇ ಶತಕವಾಗಿದೆ.* ಸ್ಯಾಂಟನರ್ ಪಡೆ, ದುಬೈನಲ್ಲಿ ಇದೇ 9ರಂದು ನಡೆಯುವ ಫೈನಲ್ನಲ್ಲಿ ಭಾರತ ತಂಡವನ್ನು ಎದರಿಸಲಿದೆ. ಇದರೊಂದಿಗೆ ಆತಿಥೇಯ ಪಾಕ್ನಲ್ಲಿ ಟೂರ್ನಿಯ ಪಂದ್ಯಗಳು ಪೂರ್ಣಗೊಂಡವು.