Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೇಂದ್ರ ಬಜೆಟ್ 2026-27: 'ವಿಕಸಿತ ಭಾರತ'ದತ್ತ ನಿರ್ಮಲಾ ಸೀತಾರಾಮನ್ ಅವರ ಐತಿಹಾಸಿಕ 9ನೇ ಬಜೆಟ್ Part-1 (part-2)
Authored by:
Akshata Halli
Date:
2 ಫೆಬ್ರುವರಿ 2026
➤
ನೇರ ತೆರಿಗೆ ಬದಲಾವಣೆಗಳು:
1.
ಹೊಸ ಆದಾಯ ತೆರಿಗೆ ಕಾಯ್ದೆ 2025:
ಇದು ಏಪ್ರಿಲ್ 2026 ರಿಂದ ಜಾರಿಗೆ ಬರಲಿದೆ. ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲಾಗಿದೆ.
2.
TCS ಕಡಿತ:
ವಿದೇಶಿ ಪ್ರವಾಸ ಪ್ಯಾಕೇಜ್ಗಳ ಮೇಲಿನ ಟಿಸಿಎಸ್ ದರವನ್ನು
20% ರಿಂದ 2%
ಕ್ಕೆ ಇಳಿಸಲಾಗಿದೆ.
3.
ಸ್ಟಾಕ್ ಮಾರ್ಕೆಟ್:
ಫ್ಯೂಚರ್ಸ್ (Futures) ಮೇಲಿನ STT ದರವನ್ನು 0.05% ಕ್ಕೆ ಮತ್ತು ಆಪ್ಷನ್ಸ್ (Options) ಮೇಲಿನ ದರವನ್ನು 0.15% ಕ್ಕೆ ಏರಿಸಲಾಗಿದೆ.
4.
ಐಟಿ ವಲಯ:
ಸಾಫ್ಟ್ವೇರ್ ಅಭಿವೃದ್ಧಿ ಸೇವೆಗಳಿಗೆ ಏಕರೂಪದ 'ಸೇಫ್ ಹಾರ್ಬರ್' ನಿಯಮಗಳು.
➤
ಪರೋಕ್ಷ ತೆರಿಗೆ ಮತ್ತು ಸುಂಕಗಳು:
1.
ಚಿನ್ನ ಮತ್ತು ಬೆಲೆಬಾಳುವ ಲೋಹಗಳು:
ಸುಂಕಗಳಲ್ಲಿ ತರ್ಕಬದ್ಧಗೊಳಿಸುವಿಕೆ.
2.
ಕ್ಯಾನ್ಸರ್ ಔಷಧಿಗಳು:
17 ವಿಧದ ಜೀವ ಉಳಿಸುವ ಔಷಧಿಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ರದ್ದು.
3.
ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್:
ಮೈಕ್ರೋವೇವ್ ಓವನ್ ಬಿಡಿಭಾಗಗಳ ಮೇಲಿನ ಸುಂಕ ಕಡಿತ.
4.
ವಿಮಾನಯಾನ:
ವಿಮಾನ ಬಿಡಿಭಾಗಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಮೇಲಿನ ಸುಂಕ ರದ್ದು.
➤
ವಿತ್ತೀಯ ಕೊರತೆಯ ಗುರಿ :4.3%:
ವಿತ್ತೀಯ ಕೊರತೆಯು ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಒಟ್ಟು ಆದಾಯದ (ಸಾಲವನ್ನು ಹೊರತುಪಡಿಸಿ) ನಡುವಿನ ವ್ಯತ್ಯಾಸವಾಗಿದೆ.2026-27ನೇ ಸಾಲಿನ ಬಜೆಟ್ ಅಂದಾಜಿನಲ್ಲಿ (BE) ವಿತ್ತೀಯ ಕೊರತೆಯನ್ನು ಜಿಡಿಪಿಯ
4.3%
ಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷದ (2025-26) ಪರಿಷ್ಕೃತ ಅಂದಾಜಾದ 4.4% ಕ್ಕಿಂತ ಕಡಿಮೆಯಾಗಿದೆ. ಇದೇ ವೇಳೆ ದೇಶದ ಸಾಲ ಮತ್ತು ಜಿಡಿಪಿ ಅನುಪಾತವು 56.1% ರಿಂದ
55.6%
ಕ್ಕೆ ಇಳಿಯುವ ನಿರೀಕ್ಷೆಯಿದೆ.
➤
ಬಯೋಫಾರ್ಮಾ ಶಕ್ತಿ ಯೋಜನೆ:
ಮುಂದಿನ 5 ವರ್ಷಗಳ ಅವಧಿಗೆ
₹10,000 ಕೋಟಿ
ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯಡಿ 3 ಹೊಸ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (NIPER) ಸ್ಥಾಪಿಸಲಾಗುವುದು ಮತ್ತು ಈಗಿರುವ 7 ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ದೇಶಾದ್ಯಂತ 1000ಕ್ಕೂ ಹೆಚ್ಚು ಮಾನ್ಯತೆ ಪಡೆದ ಕ್ಲಿನಿಕಲ್ ಟ್ರಯಲ್ ಸೈಟ್ಗಳ ಜಾಲವನ್ನು ನಿರ್ಮಿಸುವ ಮೂಲಕ ಹೊಸ ಔಷಧಿಗಳ ಸಂಶೋಧನೆಗೆ ವೇಗ ನೀಡಲಾಗುವುದು.
➤ ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ಗಳು:
ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ಸರ್ಕಾರವು 7 ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಘೋಷಿಸಿದ್ದು, ಅದರಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಿದೆ.
➤
ಭಾರತ್-ವಿಸ್ತಾರ್ (Bharat-VISTAAR) ತಂತ್ರಜ್ಞಾನ:
ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಈ ಕ್ರಾಂತಿಕಾರಿ AI ಉಪಕರಣವನ್ನು ಪರಿಚಯಿಸಿದೆ.ಇದು ಬಹುಭಾಷಾ
AI (ಕೃತಕ ಬುದ್ಧಿಮತ್ತೆ)
ಸಾಧನವಾಗಿದೆ.
➤
ಕೇಂದ್ರ ಬಜೆಟ್ ಮತ್ತು ಕರ್ನಾಟಕ:
1. ತೆರಿಗೆ ಹಂಚಿಕೆಯಲ್ಲಿ ಭಾರಿ ಏರಿಕೆ (Tax Devolution):
16ನೇ ಹಣಕಾಸು ಆಯೋಗದ (16th Finance Commission) ಶಿಫಾರಸುಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು,ರಾಜ್ಯಗಳ ಒಟ್ಟು ಪಾಲಿನಲ್ಲಿ ಕರ್ನಾಟಕದ ಪಾಲನ್ನು
3.64% ರಿಂದ 4.13%
ಕ್ಕೆ ಏರಿಸಲಾಗಿದೆ. 2026-27ರ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ ಸುಮಾರು
₹63,049 ಕೋಟಿ
ತೆರಿಗೆ ಪಾಲು ಸಿಗಲಿದೆ.
2. ಸಿಟಿ ಎಕನಾಮಿಕ್ ರೀಜನ್ (CER) - ಟಯರ್-2 ನಗರಗಳಿಗೆ ಬೂಸ್ಟ್:
ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಇತರ ನಗರಗಳನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆ ಘೋಷಿಸಲಾಗಿದೆ.ಆಯ್ದ 'ಸಿಟಿ ಎಕನಾಮಿಕ್ ರೀಜನ್'ಗಳಿಗೆ 5 ವರ್ಷಗಳ ಅವಧಿಗೆ
ತಲಾ ₹5,000 ಕೋಟಿ
ಅನುದಾನ ನೀಡಲಾಗುವುದು.
3. ಹೈಸ್ಪೀಡ್ ರೈಲು ಸಂಪರ್ಕ:
ಬೆಂಗಳೂರನ್ನು ನೆರೆಯ ರಾಜ್ಯಗಳ ಪ್ರಮುಖ ನಗರಗಳೊಂದಿಗೆ ಜೋಡಿಸಲು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಘೋಷಿಸಲಾಗಿದೆ: ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು
4. ಉನ್ನತ ಭದ್ರಾ ಮತ್ತು ನೀರಾವರಿ ಯೋಜನೆಗಳ ಸ್ಥಿತಿ:
ಕರ್ನಾಟಕ ಸರ್ಕಾರವು ಉನ್ನತ ಭದ್ರಾ ಯೋಜನೆಗೆ ₹5,300 ಕೋಟಿ ಅನುದಾನ ಮತ್ತು ಉನ್ನತ ಕೃಷ್ಣಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆಗಾಗಿ ಒತ್ತಾಯಿಸಿತ್ತು. ಬಜೆಟ್ನಲ್ಲಿ ಈ ಯೋಜನೆಗಳ ಬಗ್ಗೆ ನೇರವಾದ ಹೊಸ ಘೋಷಣೆಗಳಿಲ್ಲದಿದ್ದರೂ, ರಾಜ್ಯಗಳಿಗೆ ಒಟ್ಟಾರೆಯಾಗಿ ನೀಡಲಾಗುವ ₹1.4 ಲಕ್ಷ ಕೋಟಿ 'ಹಣಕಾಸು ಆಯೋಗದ ಅನುದಾನ'ದಲ್ಲಿ ಕರ್ನಾಟಕವು ತನ್ನ ಪಾಲನ್ನು ನೀರಾವರಿ ಮತ್ತು ವಿಪತ್ತು ನಿರ್ವಹಣೆಗೆ ಬಳಸಿಕೊಳ್ಳಬಹುದಾಗಿದೆ.
5. ಕೈಗಾರಿಕೆ ಮತ್ತು ಶಿಕ್ಷಣ:
-
ಸೆಮಿಕಂಡಕ್ಟರ್ ಹಬ್:
ಕರ್ನಾಟಕವು ಈಗಾಗಲೇ ಸೆಮಿಕಂಡಕ್ಟರ್ ವಲಯದಲ್ಲಿ ಮುಂಚೂಣಿಯಲ್ಲಿದ್ದು, 'ISM 2.0' ಘೋಷಣೆಯಿಂದ ರಾಜ್ಯದ ಚಿಪ್ ತಯಾರಿಕಾ ಘಟಕಗಳಿಗೆ ಹೆಚ್ಚಿನ ಬಲ ಸಿಗಲಿದೆ.
-
ಯೂನಿವರ್ಸಿಟಿ ಟೌನ್ಶಿಪ್:
ಕೈಗಾರಿಕಾ ಕಾರಿಡಾರ್ಗಳ ಬಳಿ 5 ವಿಶ್ವವಿದ್ಯಾಲಯ ಟೌನ್ಶಿಪ್ಗಳನ್ನು ನಿರ್ಮಿಸುವ ಯೋಜನೆಯಡಿ ತುಮಕೂರು ಅಥವಾ ಧಾರವಾಡ ಪ್ರದೇಶಗಳು ಲಾಭ ಪಡೆಯುವ ನಿರೀಕ್ಷೆಯಿದೆ.
Take Quiz
Loading...