* ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರವಿಚಂದ್ರನ್ ಅಶ್ವಿನ್ ಅವರ ಸಾಧನೆಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ, ಚೆನ್ನೈ ಮಹಾನಗರ ಪಾಲಿಕೆ (ಜಿಸಿಸಿ) ಮಹತ್ವದ ನಿರ್ಧಾರ ಕೈಗೊಂಡಿದೆ.* ನಗರದ ಒಂದು ರಸ್ತೆ ಅವರಿಗೆ ಸಮರ್ಪಿಸಲು ಶುಕ್ರವಾರ(ಮಾರ್ಚ್ 21) ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ.* ತಮಿಳುನಾಡಿನ ಕ್ರಿಕೆಟ್ ದಿಗ್ಗಜರಾಗಿರುವ ಅಶ್ವಿನ್ ಅವರ ಕೊಡುಗೆಯನ್ನು ಗುರುತಿಸುವ ಉದ್ದೇಶದಿಂದ, ಕೇರಂ ಬಾಲ್ ಈವೆಂಟ್ ಮತ್ತು ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ನ ಸಿಒಒ ಎಸ್. ಕಾರ್ತಿಕ್ ಈ ಪ್ರಸ್ತಾವವನ್ನು ಮಂಡಿಸಿದ್ದರು.* ಪಶ್ಚಿಮ ಮಾಂಬಲಮ್ನ ರಾಮಕೃಷ್ಣಪುರಂ ರಸ್ತೆಗೆ ಅಶ್ವಿನ್ ಅವರ ಹೆಸರಿಡಲು ಚೆನ್ನೈ ಮೇಯರ್ ಆರ್. ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.* ಪದ್ಮಶ್ರೀ ಪುರಸ್ಕೃತ ಅಶ್ವಿನ್ ಅವರು ತಮಿಳುನಾಡು ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಕ್ರಿಕೆಟ್ ಲೋಕದಲ್ಲಿ ಶ್ರೇಷ್ಠ ಸ್ಪಿನ್ನರ್ ಮತ್ತು ಆಲ್ರೌಂಡರ್ ಎಂಬ ಖ್ಯಾತಿ ಗಳಿಸಿದ್ದಾರೆ.* ಈ ನಿರ್ಧಾರವನ್ನು JCC ಅಂಗೀಕರಿಸುವ ಮುನ್ನ, ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗಿತ್ತು.