* ಕೇಂದ್ರೀಯ ನೇರ ತೆರಿಗೆ ಮಂಡಳಿಯ (CBDT) ಅಧ್ಯಕ್ಷರಾಗಿ ರವಿ ಅಗರ್ವಾಲ್ ಅವರ ಅಧಿಕಾರಾವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ.* ಈ ಬಗ್ಗೆ ಜುಲೈ 1, 2025 ರಿಂದ ಜೂನ್ 30, 2026 ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿಯೋಜನೆ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.* ಅಗರ್ವಾಲ್ ಅವರು 1988ರ ಬ್ಯಾಚ್ನ ಭಾರತೀಯ ಕಂದಾಯ ಸೇವೆಯ (IRS) ಹಿರಿಯ ಅಧಿಕಾರಿ. ಅವರು ಜೂನ್ 2024 ರಲ್ಲಿ ನಿತಿನ್ ಗುಪ್ತಾ ಅವರ ನಂತರ CBDT ಅಧ್ಯಕ್ಷರಾಗಿದ್ದು, ಹಿಂದೆ ಸದಸ್ಯ (ಆಡಳಿತ) ಹುದ್ದೆಯಲ್ಲಿದ್ದರು.* ಸಿಬಿಡಿಟಿಯು ಒಬ್ಬ ಅಧ್ಯಕ್ಷ ಮತ್ತು ಆರು ಸದಸ್ಯರನ್ನು ಒಳಗೊಂಡಿದೆ. ಈ ಮಂಡಳಿ ಆದಾಯ ತೆರಿಗೆ ಇಲಾಖೆಯ ನೀತಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.* ಇದಕ್ಕಾಗಿ CBDT ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ತೆರಿಗೆ ಮೌಲ್ಯಮಾಪನ ಸಂದರ್ಭದಲ್ಲಿ ಬರುವ ಎಲ್ಲಾ ಪ್ರಶ್ನೆಗಳು ಸ್ಪಷ್ಟ, ಪ್ರಸ್ತುತ ಮತ್ತು ಸಮರ್ಥನೀಯವಾಗಿರಬೇಕು ಎಂದು ಸೂಚಿಸಲಾಗಿದೆ. ಅಪ್ರಸ್ತುತ ಪ್ರಶ್ನೆಗಳನ್ನು ಸಂಪೂರ್ಣ ತಪ್ಪಿಸುವಂತೆ ಆಗ್ರಹಿಸಲಾಗಿದೆ.* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರ ಸ್ನೇಹಿ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ತೆರಿಗೆ ದಾವೆಗಳ ಮೇಲ್ಮನವಿ ವಿಲೇವಾರಿಗೆ ಆದ್ಯತೆ ನೀಡಲಾಗುವುದು. 2025-26ರಲ್ಲಿ 225,000 ಕ್ಕೂ ಹೆಚ್ಚು ಮೇಲ್ಮನವಿಗಳನ್ನು ವಿಲೇವಾರಿ ಮಾಡುವ ಗುರಿಯಿದೆ.