Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತ-ಕೆನಡಾ ಸಂಬಂಧಕ್ಕೆ ಹೊಸ 'ರೀಸೆಟ್': ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಭಾರತ ಭೇಟಿ
Authored by:
Akshata Halli
Date:
25 ಫೆಬ್ರುವರಿ 2026
➤
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿನ ಬಿಕ್ಕಟ್ಟನ್ನು ಹೋಗಲಾಡಿಸಿ, ಹೊಸ ಆಯಾಮ ನೀಡಲು ಕೆನಡಾದ ನೂತನ ಪ್ರಧಾನಿ
ಮಾರ್ಕ್ ಕಾರ್ನಿ (Mark Carney)
ಅವರು ಫೆಬ್ರವರಿ 26 ರಿಂದ ಮಾರ್ಚ್ 7 ರವರೆಗೆ ಇಂಡೋ-ಪೆಸಿಫಿಕ್ ಪ್ರಾಂತ್ಯದ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಪ್ರವಾಸದ ಭಾಗವಾಗಿ ಅವರು ಮೊದಲು ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.
-
ಮಾರ್ಕ್ ಕಾರ್ನಿ ಅವರು ಫೆಬ್ರವರಿ 26 ರಂದು ಭಾರತಕ್ಕೆ ಆಗಮಿಸಲಿದ್ದು, ಮೊದಲಿಗೆ ವಾಣಿಜ್ಯ ನಗರಿ
ಮುಂಬೈ
ನಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
-
ಮಾರ್ಚ್ 2 ರಂದು ದೆಹಲಿಯಲ್ಲಿ ಪ್ರಧಾನಿ
ನರೇಂದ್ರ ಮೋದಿ
ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
-
ಭಾರತದ ಭೇಟಿಯ ನಂತರ ಅವರು ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳಿಗೂ ಭೇಟಿ ನೀಡಲಿದ್ದಾರೆ.
➤
ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ 'ಖಲಿಸ್ತಾನ್' ವಿವಾದದಿಂದಾಗಿ ಹಳಸಿದ್ದ ಸಂಬಂಧವನ್ನು ಸುಧಾರಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಕೆಳಗಿನ ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಗೆ ಉಭಯ ದೇಶಗಳು ಒತ್ತು ನೀಡಲಿವೆ:
-
ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, 2024ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ
30.8 ಬಿಲಿಯನ್ ಡಾಲರ್
ತಲುಪಿತ್ತು. ಈಗ ಇದನ್ನು 2030ರ ವೇಳೆಗೆ
50-70 ಬಿಲಿಯನ್ ಡಾಲರ್
ಗೆ ಏರಿಸುವ ಗುರಿ ಹೊಂದಲಾಗಿದೆ.
-
CEPA ಒಪ್ಪಂದ:
ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (Comprehensive Economic Partnership Agreement) ವೇಗ ನೀಡಲು ನಿರ್ಧರಿಸಲಾಗಿದೆ.
-
ತಂತ್ರಜ್ಞಾನ ಮತ್ತು AI:
ಕೃತಕ ಬುದ್ಧಿಮತ್ತೆ (AI), ಕ್ಲೀನ್ ಎನರ್ಜಿ (ಸ್ವಚ್ಛ ಇಂಧನ) ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ.
-
ಪ್ರತಿಭೆ ಮತ್ತು ವಲಸೆ:
ಸುಮಾರು 20,000 ಭಾರತೀಯ ತಂತ್ರಜ್ಞರಿಗೆ ಕೆನಡಾದಲ್ಲಿ ಉದ್ಯೋಗಾವಕಾಶ ನೀಡುವ ವಿಶೇಷ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
➤
ಕಳೆದ ನವೆಂಬರ್ನಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ G20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಕಾರ್ನಿ ಭೇಟಿಯಾಗಿದ್ದರು. ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ ಉಂಟಾಗಿದ್ದ ಕಡಿತಗೊಂಡ ರಾಜತಾಂತ್ರಿಕ ಸಂಪರ್ಕವನ್ನು ಮರುಸ್ಥಾಪಿಸಲು ಈ ಭೇಟಿ ಒಂದು ಮಹತ್ವದ "ರೀಸೆಟ್" (Reset) ಎಂದು ವಿಶ್ಲೇಷಿಸಲಾಗುತ್ತಿದೆ.
Take Quiz
Loading...