* ಬಿಸಿಸಿಐ ಗುರುವಾರ (ಮಾರ್ಚ್ 20) ಐಸಿಸಿ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ₹58 ಕೋಟಿ ನಗದು ಬಹುಮಾನ ಘೋಷಿಸಿದೆ.* ಮಾರ್ಚ್ 09 ದುಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತು.* ಘೋಷಿತ ನಗದು ಬಹುಮಾನ ಆಟಗಾರರು, ತರಬೇತಿದಾರರು, ಬೆಂಬಲ ಸಿಬ್ಬಂದಿ ಹಾಗೂ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಸದಸ್ಯರಿಗೆ ವಿತರಿಸಲಾಗಲಿದೆ. ಆದರೆ, ಅವರಿಗೂ ಎಷ್ಟು ಸಿಗಲಿದೆ ಎಂಬ ಮಾಹಿತಿ ಬಿಸಿಸಿಐ ಪ್ರಕಟಣೆಯಲ್ಲಿ ಬಹಿರಂಗಗೊಂಡಿಲ್ಲ.* ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪ್ರಕಟಣೆಯಲ್ಲಿ, ‘ಐಸಿಸಿ ಪ್ರಶಸ್ತಿಗಳನ್ನು ಸತತವಾಗಿ ಗೆಲ್ಲುವುದು ವಿಶೇಷ. ಈ ಜಯ ಜಾಗತಿಕ ಮಟ್ಟದಲ್ಲಿ ಭಾರತ ತಂಡದ ಸಮರ್ಪಣಾಭಾವ ಹಾಗೂ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ತಿಳಿಸಿದ್ದಾರೆ.