* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರನ್ನು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಹೊಸ ಕುಲಾಧಿಪತಿಯಾಗಿ ನೇಮಕ ಮಾಡಲಾಗಿದೆ. * ಚಂದ್ರಯಾನ ಸೇರಿದಂತೆ ಇಸ್ರೋನಲ್ಲಿ ಬಹುಮುಖ್ಯ ಬಾಹ್ಯಾಕಾಶ ಯೋಜನೆಗಳನ್ನು ಮುನ್ನಡೆಸಿದ ಖ್ಯಾತ ವಿಜ್ಞಾನಿಯಾದ ಸೋಮನಾಥ್ ಅವರ ನೇಮಕವು, ವಿಶ್ವವಿದ್ಯಾಲಯದ ಶ್ರೇಷ್ಠತೆ ಹಾಗೂ ನಾವೀನ್ಯತೆಗೆ ಮಹತ್ವದ ಹಂತವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.* ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿ ಎಂ.ಕೆ. ಶ್ರೀಧರ್ ಅವರ ಸ್ಥಾನಕ್ಕೆ ಅವರು ಬದಲಿ ಆಗಿದ್ದಾರೆ. ಶ್ರೀಧರ್ ಮುಂದುವರೆದು ಆಡಳಿತ ಮಂಡಳಿಯ ಸದಸ್ಯರಾಗಲಿದ್ದಾರೆ.* ಚಾಣಕ್ಯ ವಿವಿಯ ಆಡಳಿತ ಮಂಡಳಿ ಪುನರ್ರಚನೆಯಾಗಿದ್ದು, ಇನ್ಫೋಸಿಸ್ನ ಕ್ರಿಸ್ ಗೋಪಾಲಕೃಷ್ಣನ್, ಟಿ.ವಿ. ಮೋಹನ್ದಾಸ್ ಪೈ, ಐಐಎಂಬಿಯ ಬಿ. ಮಹಾದೇವನ್, ಶಮಿಕಾ ರವಿ, ನಂದಿನಿ ಎನ್., ನಾಗರಾಜ ರೆಡ್ಡಿ, ಸುಶಾಂತ್ ಜೋಶಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಸದಸ್ಯರಾಗಿದ್ದಾರೆ. ಸರ್ಕಾರ ಇನ್ನೊಬ್ಬ ಸದಸ್ಯನನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಯೂ ಇದೆ.