* ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸೋಮವಾರ(ಸೆಪ್ಟೆಂಬರ್ 22) ದಸರಾ ಮಹೋತ್ಸವವನ್ನು ಅಂತರರಾಷ್ಟ್ರೀಯ ‘ಬುಕರ್’ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಉದ್ಘಾಟಿಸಿದರು.* ಅವರು ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.* ಕಾರ್ಯಕ್ರಮದ ವೇಳೆ ಬಾನು ಮುಷ್ತಾಕ್ ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಸಂವಿಧಾನ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು. ನಾಡಿನ ಒಗ್ಗಟ್ಟಿನ ಪರಂಪರೆಯನ್ನು ಸ್ಮರಿಸಿ, ದಸರೆಯು ಜಾತಿ–ಧರ್ಮ–ಭಾಷೆಗಳ ಮೇಳವಾಗಿರಲಿ ಎಂಬ ಸಂದೇಶ ನೀಡಿದರು.* ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ದಸರೆಯನ್ನು ರಾಜಕೀಯಕ್ಕಿಂತ ಮೇಲಿರುವ ಸಂಸ್ಕೃತಿ–ಸಾಮರಸ್ಯದ ಉತ್ಸವ ಎಂದು ಹೈಲೈಟ್ ಮಾಡಿದರು. ಬಾನು ಅವರ ಆಯ್ಕೆಯನ್ನು ಪ್ರಶ್ನಿಸಿದವರಿಗೆ ಪ್ರತಿಕ್ರಿಯೆ ನೀಡುತ್ತಾ, ಸಂವಿಧಾನ ಮತ್ತು ನ್ಯಾಯಾಂಗದ ನಿರ್ಧಾರವನ್ನು ಗೌರವಿಸಲು ಕರೆ ನೀಡಿದರು.* ಕಾರ್ಯಕ್ರಮದ ಭದ್ರತೆಯನ್ನು ಖಚಿತಪಡಿಸಲು ಬೆಟ್ಟ ಮತ್ತು ನಗರದೆಲ್ಲೆಡೆ ಅಭೂತಪೂರ್ವ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಮೂರು ಹಂತದ ತಪಾಸಣೆ, ಕ್ಷಿಪ್ರ ಕಾರ್ಯಾಚರಣಾ ಪಡೆಯ ನಿಯೋಜನೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಯಿತು.* ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿದ ಹಿಂದುತ್ವ ಸಂಘಟನೆಗಳ ಪ್ರತಿಭಟನಾ ಬೆದರಿಕೆ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಉದ್ಘಾಟನೆಯಲ್ಲಿ ಸಾಮಾನ್ಯ ಜನರಿಗೆ ಪ್ರವೇಶ ನಿರಾಕರಿಸಿ, ಅಘೋಷಿತ ನಿಷೇಧಾಜ್ಞೆಯಂತೆಯೇ ವಾತಾವರಣ ನಿರ್ಮಾಣವಾಗಿತ್ತು.