* ಬ್ರಿಟನ್ ಮತ್ತು ಮಾರಿಷಸ್ ನಡುವಿನ ಒಪ್ಪಂದದ ಮೂಲಕ ಡಿಯಾಗೋ ಗಾರ್ಸಿಯಾ ಸೇರಿದಂತೆ ಚಾಗೋಸ್ ದ್ವೀಪಗಳನ್ನು ಮಾರಿಷಸ್ಗೆ ಹಿಂತಿರುಗಿಸುವ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.* ವಸಾಹತುಶಾಹಿ ನಿರ್ಮೂಲನೆ, ರಾಷ್ಟ್ರಗಳ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ನಿಲುವಿನಂತೆ, ಚಾಗೋಸ್ ದ್ವೀಪಗಳ ಮೇಲೆ ಮಾರಿಷಸ್ಗೆ ಇದ್ದ ಕಾನೂನು ಹಕ್ಕಿಗೆ ಭಾರತ ಸದಾ ಬೆಂಬಲ ನೀಡಿದೆ.* ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ನಿರ್ಮಿಸಲು, ಭಾರತವು ಮಾರಿಷಸ್ ಮತ್ತು ಇತರ ಹಿತಚಿಂತಕ ರಾಷ್ಟ್ರಗಳೊಂದಿಗೆ ನಿಕಟ ಸಹಕಾರದ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.* ಚಾಗೋಸ್ ದ್ವೀಪಗಳ ಕುರಿತಾದ ಅಂತರರಾಷ್ಟ್ರೀಯ ವಿವಾದವು ಹಲವು ದಶಕಗಳಿಂದ ನಡೆದುಬರುತ್ತಿದೆ.* ಈ ಸಂಘರ್ಷದ ಹಿನ್ನೆಲೆಯಲ್ಲಿ ವಸಾಹತುಶಾಹಿ ಇತಿಹಾಸ, ಮಿಲಿಟರಿ ಆಸಕ್ತಿಗಳು ಮತ್ತು ತೊಲಗಿಸಲ್ಪಟ್ಟ ಸ್ಥಳೀಯ ಜನರ ಹಕ್ಕುಗಳು ಪ್ರಮುಖ ಕಾರಣಗಳಾಗಿವೆ.* 60 ದ್ವೀಪಗಳನ್ನು ಒಳಗೊಂಡ ಚಾಗೋಸ್ ದ್ವೀಪಸಮೂಹದ ಡಿಯಾಗೋ ಗಾರ್ಸಿಯಾ ಅಮೆರಿಕದ ಪ್ರಮುಖ ಸೇನಾ ನೆಲೆಯಾಗಿದೆ.* 1814ರಲ್ಲಿ ಈ ದ್ವೀಪಗಳು ಬ್ರಿಟಿಷರ ವಸಾಹತು ಭಾಗವಾಗಿದ್ದು, 1965ರಲ್ಲಿ ಮಾರಿಷಸ್ಗೆ ಸ್ವಾತಂತ್ರ್ಯ ನೀಡುವ ಮುನ್ನ ಬ್ರಿಟನ್ ಇದನ್ನು ಬೇರ್ಪಡಿಸಿತು.* 1966ರಿಂದ 1973ರ ನಡುವೆ ಚಾಗೋಸ್ ನಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಗೊಳಿಸಿ, ಬ್ರಿಟನ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಡಿಯಾಗೋ ಗಾರ್ಸಿಯಾದಲ್ಲಿ ಸೇನಾ ನೆಲೆಗೆ ಅವಕಾಶ ನೀಡಿತು.* 1968ರಲ್ಲಿ ಮಾರಿಷಸ್ ಸ್ವಾತಂತ್ರ್ಯ ಪಡೆದುದಾದರೂ ಚಾಗೋಸ್ ದ್ವೀಪಗಳು ಅದರ ನಿಯಂತ್ರಣದಿಂದ ಹೊರವಾಗಿದವು. ನಂತರ ಮಾರಿಷಸ್ ತನ್ನ ಹಕ್ಕು ಹುರಿದುಂಬಿಸಿತು ಮತ್ತು ಬ್ರಿಟನ್ ಕ್ರಮವನ್ನು ಅಕ್ರಮವೆಂದು ಘೋಷಿಸಿತು.* ಈ ನಿಲುವಿಗೆ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯವೂ ಬೆಂಬಲ ನೀಡಿದವು. ಇದೀಗ ಮಾರಿಷಸ್ ದ್ವೀಪಗಳ ನಿಯಂತ್ರಣ ಪುನಃ ಪಡೆಯುತ್ತಿದೆ. ಆದರೆ, ಡಿಯಾಗೋ ಗಾರ್ಸಿಯಾದ ಸೇನಾ ನೆಲೆಯನ್ನು ಮುಂದಿನ 99 ವರ್ಷಗಳ ಕಾಲ ಅಮೆರಿಕ ಮತ್ತು ಬ್ರಿಟನ್ ಗುತ್ತಿಗೆಗೆ ಪಡೆದಿದ್ದು, ಬ್ರಿಟನ್ ವರ್ಷಕ್ಕೆ 101 ಮಿಲಿಯನ್ ಪೌಂಡ್ ಪಾವತಿಸಲಿದೆ.