* ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಕಿರುಪಟ್ಟಿಯಲ್ಲಿ ಸ್ಥಾನಪಡೆದು ಇತಿಹಾಸ ನಿರ್ಮಿಸಿದೆ.* ಇದು ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಕನ್ನಡ ಭಾಷೆಯ ಪುಸ್ತಕವಾಗಿದ್ದು, ಮಂಗಳವಾರ (ಏಪ್ರಿಲ್ 8, 2025) ಈ ಬೆಳವಣಿಗೆಯು ಅಧಿಕೃತವಾಗಿ ಘೋಷಿಸಲಾಯಿತು. 'ಹಾರ್ಟ್ ಲ್ಯಾಂಪ್' ನು ದೀಪಾ ಭಸ್ತಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.* ಈ ಸಂಕಲನವು 1990 ರಿಂದ 2023 ರ ನಡುವೆ ಬಾನು ಮುಷ್ತಾಕ್ ಬರೆದ 12 ಸಣ್ಣ ಕಥೆಗಳ ಆಯ್ಕೆಯಾಗಿದೆ. ಇತ್ತೀಚೆಗೆ ಇವರ ಮತ್ತೊಂದು ಕಥಾ ಸಂಕಲನ 'ಹಸೀನಾ ಮತ್ತು ಅದರ್ ಸ್ಟೋರೀಸ್' ಕೂಡ ದೀಪಾ ಭಸ್ತಿಯವರ ಅನುವಾದದ ಮೂಲಕ 2024 ರ ಇಂಗ್ಲಿಷ್ ಪೆನ್ ಅನುವಾದ ಪ್ರಶಸ್ತಿಯನ್ನು ಗೆದ್ದಿತ್ತು.* ಕರ್ನಾಟಕ ಮೂಲದ ಬರಹಗಾರ್ತಿ, ವಕೀಲೆ ಮತ್ತು ಕಾರ್ಯಕರ್ತೆ ಬಾನು ಮುಷ್ತಾಕ್ ಬರೆದ ಈ ಪುಸ್ತಕವು ದಕ್ಷಿಣ ಭಾರತದ ಮುಸ್ಲಿಂ ಮಹಿಳೆಯರ ಜೀವನವನ್ನು ಆಳವಾಗಿ ಚಿತ್ರಿಸುತ್ತದೆ. * ಪ್ರತಿಷ್ಠಿತ ಪುರಸ್ಕಾರಗಳತ್ತ ಕನ್ನಡ ಸಾಹಿತ್ಯ ಸಾಗುತ್ತಿರುವುದು ಎಲ್ಲ ಬರಹಗಾರರಿಗೆ ಸ್ಫೂರ್ತಿದಾಯಕವಾಗಿದೆ.* ಲೇಖಕಿ ಮುಷ್ತಾಕ್ ತಮ್ಮ ಲೇಖನಗಳಿಗೆ ಪ್ರೇರಣೆಯಾಗಿ ದಿನನಿತ್ಯದ ಘಟನೆಗಳು ಮತ್ತು ವೈಯಕ್ತಿಕ ಅನುಭವಗಳನ್ನು ಉಲ್ಲೇಖಿಸುತ್ತಾ, “ನನ್ನ ಹೃದಯವೇ ನನ್ನ ಅಧ್ಯಯನ ಕ್ಷೇತ್ರ” ಎಂಬುದಾಗಿ ತಿಳಿಸಿದ್ದಾರೆ.