* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಫೆಬ್ರವರಿ 1 (ಶನಿವಾರ)ದಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ನ್ನು ಮಂಡಿಸಿದ್ದು, ಈ ಬಜೆಟ್ನಲ್ಲಿ ಭಾರತದಾದ್ಯಂತ 120 ಹೊಸ ಸ್ಥಳಗಳಿಗೆ ಟರ್ಬೋಪ್ರೋಲ್ ವಿಮಾನ ಅಥವಾ ಹೆಲಿಕಾಪ್ಟರ್ ಸಂಪರ್ಕವನ್ನು ಒದಗಿಸುವ ಹಾಗೂ ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಗುರಿಯಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆಯನ್ನು ಘೋಷಿಸಿದ್ದಾರೆ.* ಕೇಂದ್ರ ಸರ್ಕಾರ ಜನ ಸಾಮಾನ್ಯರು ಸಹ ವಿಮಾನದಲ್ಲಿ ಹಾರಾಡಲು ಅನುಕೂಲವಾಗಬೇಕು ಎಂದು ಅಕ್ಟೋಬರ್ 21, 2016ರಂದು ಉಡಾನ್ ಯೋಜನೆಯನ್ನು ಘೋಷಣೆ ಮಾಡಿತು.* 'ಉಡೇ ದೇಶ್ ಕಾ ಆಮ್ ನಾಗರೀಕ್' ಎನ್ನುವ ಘೋಷಣೆಯೊಂದಿಗೆ ಈ ಯೋಜನೆ ಆರಂಭಿಸಲಾಯಿತು. ನಾಗರಿಕ ವಿಮಾನಯಾನ ಸಚಿವಾಲಯ ದೇಶಾದ್ಯಂತ ವಿಮಾನಗಳ ಮೂಲಕ ಪ್ರಾದೇಶಿಕ ವಾಯು ಸಂಪರ್ಕವವನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾಡಲು ಈ ಯೋಜನೆ ಜಾರಿಗೊಳಿಸಿತು.* ಮೊದಲ ಉಡಾನ್ ಯೋಜನೆಯು 619 ಮಾರ್ಗಗಳೊಂದಿಗೆ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಮೂಲಕ 1.5 ಕೋಟಿ ಮಧ್ಯಮ ವರ್ಗದ ಜನರಿಗೆ ಪ್ರಯೋಜನವನ್ನು ನೀಡಿದೆ ಎಂದು ಸೀತಾರಾಮನ್ ಹೇಳಿದರು. * ನವೀಕರಿಸಲಾದ ಈ ಉಡಾನ್ ಯೋಜನೆ ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ನಿರೀಕ್ಷೆಯಿದೆ. ಮತ್ತು ಇದು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ವಿಮಾನ ಪ್ರಯಾಣವನ್ನು ಉತ್ತೇಜಿಸುವ ಗುರಿ ಹೊಂದಿದೆ.