* ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಂಘ (NESTS) ಮತ್ತು ಯುನಿಸೆಫ್ ಸಹಯೋಗದಲ್ಲಿ "ತಲಾಶ್" ಉಪಕ್ರಮವನ್ನು ಆರಂಭಿಸಲಾಗಿದೆ. * ಇದು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ಅಧ್ಯಯನ ಮಾಡುವ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸಮರ್ಪಿತ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ.* ತಲಾಶ್ ಒಂದು ಡಿಜಿಟಲ್ ವೇದಿಕೆ ಆಗಿದ್ದು, ಇದು ವಿದ್ಯಾರ್ಥಿಗಳ ಸ್ವಯಂ ಜಾಗೃತಿ, ವೃತ್ತಿ ಯೋಜನೆ ಹಾಗೂ ಜೀವನ ಕೌಶಲ್ಯಗಳ ಅಭಿವೃದ್ದಿಗೆ ನೆರವಾಗುತ್ತದೆ.* ವಿದ್ಯಾರ್ಥಿಗಳಲ್ಲಿ ಆತ್ಮನಂಬಿಕೆ, ಉದ್ದೇಶಪೂರ್ಣ ವೃತ್ತಿ ಆಯ್ಕೆ ಹಾಗೂ ಜೀವನ ನಿರ್ವಹಣಾ ಕೌಶಲ್ಯಗಳ ಅಭಿವೃದ್ಧಿಗೆ ಈ ವೇದಿಕೆಯಿಂದ ಸಹಾಯ ಮಾಡಲಾಗುತ್ತದೆ.* ಈ ಉಪಕ್ರಮವು ತಂತ್ರಜ್ಞಾನವನ್ನು ಬಳಸಿ ದೂರದ ಬುಡಕಟ್ಟು ಪ್ರದೇಶಗಳ ಯುವಕರಿಗೆ ತಲುಪುತ್ತದೆ. ವಿದ್ಯಾರ್ಥಿಗಳ ಶಿಕ್ಷಣ, ಭಾವನಾತ್ಮಕ ಒಳಗೊಳ್ಳುವಿಕೆ ಹಾಗೂ ಉದ್ದೇಶದ ಅಂತರವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.* ಇದು ರಾಷ್ಟ್ರೀಯ ಶಿಕ್ಷಣ ನೀತಿ 2020 ನ ಉದ್ದೇಶಗಳೊಂದಿಗೆ ಕೂಡ ಹೊಂದಾಣಿಕೆಯಾಗುತ್ತದೆ.* ಈ ಯೋಜನೆಯ ಭಾಗವಾಗಿ, ಋತುಚಕ್ರ ಸಂಬಂಧಿತ ನೈರ್ಮಲ್ಯ ಉತ್ಪನ್ನಗಳ ವಿತರಣೆಗಾಗಿ ವಿಶೇಷ ಅಭಿಯಾನಗಳನ್ನು ಕೂಡ ಕೈಗೊಳ್ಳಲಾಗಿದೆ, ಇದರಿಂದ ಬಾಲಕಿಯರ ಆರೋಗ್ಯ ಮತ್ತು ಗೌರವಪೂರ್ಣ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ.