* ಭಾರತದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಗಂಭೀರ ಹೆಜ್ಜೆಯಾಗಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು “ಆದಿ ಕರ್ಮಯೋಗಿ” ಎಂಬ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಿದೆ.* ಈ ಯೋಜನೆಯ ಉದ್ದೇಶ, ಕ್ಷೇತ್ರಮಟ್ಟದ ಅಧಿಕಾರಿಗಳನ್ನು ಪ್ರೇರೇಪಿಸಿ, ಅವರಿಗೆ ಸಮರ್ಪಕ ತರಬೇತಿ ನೀಡುವ ಮೂಲಕ ಜನಪರ ಸೇವೆಯನ್ನು ಪರಿಣಾಮಕಾರಿಯಾಗಿ ರೂಪಿಸುವುದಾಗಿದೆ.* ನವದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ಜುವಾಲ್ ಓರಾಮ್ ಅವರು “ಆದಿ ಅನ್ವೇಷಣ್” ಸಮ್ಮೇಳನದ ಈ ಯೋಜನೆಯ ಘೋಷಣೆ ಮಾಡಿದರು. ಇದರ ಮೂಲಕ ಬ್ಲಾಕ್ ಮಟ್ಟದ ಅಧಿಕಾರಿ ಇಳಿಯುವವರೆಗೆ ಎಲ್ಲರನ್ನು ಒಳಗೊಂಡು ಸುಮಾರು 20 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಗುವುದು.* ಅಧಿಕಾರಿಗಳ ಅಭಿಪ್ರಾಯದಂತೆ, ಯೋಜನೆಗಳ ವೈಫಲ್ಯದ ಹಿಂದೆ ಯೋಜನೆಯ ಕೊರತೆ ಇಲ್ಲ, ಆದರೆ ಪ್ರೇರಣೆಯ ಕೊರತೆಯೇ ಕಾರಣ. ಈ ಯೋಜನೆಯು ಸಿಬ್ಬಂದಿಯಲ್ಲಿರುವ ಸೇವಾ ಮನೋಭಾವನೆ, ಹೊಣೆಗಾರಿಕೆ ಹಾಗೂ ನೈತಿಕ ಬದ್ಧತೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿದೆ.*ಆದಿ ಕರ್ಮಯೋಗಿಯ ಮೂಲಕ ದಟ್ಟ ಅರಣ್ಯ ಹಾಗೂ ಹಿಮಶಿಖರಗಳವರೆಗೆ ವಿಸ್ತರಿಸಿರುವ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳ ಪ್ರಾಪ್ಯತೆಯನ್ನು ಸುಧಾರಿಸುವ ಆಶಯವಿದೆ. ಇದರೊಂದಿಗೆ, ಹೆಚ್ಚು ಉತ್ತೇಜಿತ, ಸಮರ್ಥ ಮತ್ತು ಸಹಾನುಭೂತಿದಾಯಕ ಆಡಳಿತ ವ್ಯವಸ್ಥೆ ರೂಪಿಸುವ ಕನಸು ಕೂಡ ಅಡಗಿದೆ.