* ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದಿಂದ ಏಪ್ರಿಲ್ 29 ರಂದು ಮಹಾಮಾನವತಾವಾದಿ ಬಸವೇಶ್ವರ ಪ್ರಶಸ್ತಿವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಅವರ ಪತ್ನಿ ಮೀನಾಕ್ಷಿ ಬೈರೇಗೌಡ ಅವರಿಗೆ ನೀಡಲಾಗುತ್ತದೆ.* ‘ಆದರ್ಶ ದಂಪತಿ’ ವಿಭಾಗದಿಂದ ಸಚಿವ ಕೃಷ್ಣಬೈರೇಗೌಡ ದಂಪತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. * ಈ ಸಮಾರಂಭ ತುಮಕೂರಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿಏಪ್ರಿಲ್ 29 ಸಂಜೆ 7.30ಕ್ಕೆ ನಡೆಯಲಿದೆ.* ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ.* ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗ್ರಂಥ ಲೋಕಾರ್ಪಣೆಯಾಗಿ "ದ್ಯಾಂಪೂರ ಚನ್ನಕವಿಗಳು" ಮತ್ತು "ವಿಶ್ವಗುರು ಬಸವಣ್ಣನವರು" ಬಿಡುಗಡೆಗೊಳ್ಳಲಿದೆ.* ಏಪ್ರಿಲ್ 30 ರಂದು ಬೆಳಗ್ಗೆ 9ಕ್ಕೆ ಮೆರವಣಿಗೆ ಹಾಗೂ ಸಂಜೆ 7.30ಕ್ಕೆ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ. "ಲಿಂಗಾಯತ ಚಳವಳಿ 2017-18" ಹಾಗೂ "ವಚನ ದರ್ಶನ" ಗ್ರಂಥಗಳ ಲೋಕಾರ್ಪಣೆ ನಡೆಯಲಿದೆ.* ಮುಖ್ಯ ಅತಿಥಿಗಳಾಗಿ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ವಿಪ ಸದಸ್ಯ ಮೋಹನ ಲಿಂಬಿಕಾಯಿ ಪಾಲ್ಗೊಳ್ಳುವರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ದ್ಯಾಂಪೂರ ಚನ್ನಕವಿಗಳು ಹಾಗೂ ವಿಶ್ವಗುರು ಬಸವಣ್ಣನವರು ಗ್ರಂಥಗಳನ್ನು ಲೋಕಾರ್ಪಣೆಗೊಳಿಸುವರು ಎಂದು ಹೇಳಿದರು.ಪ್ರಶಸ್ತಿ ವಿವರ:* ಲಿಂಬಯ್ಯಸ್ವಾಮಿ ಪ್ರತಿಷ್ಠಾನವು 1998ರಿಂದ ತಿಂಗಳು ಮೂರು ವಿಭಾಗಗಳಲ್ಲಿ ಈವರೆಗೆ 26 ಪ್ರಶಸ್ತಿಗಳನ್ನು ನೀಡಿದ್ದು, ಪ್ರತಿ ಪ್ರಶಸ್ತಿಗೆ ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.