* ಬ್ರಿಟನ್ ಸರ್ಕಾರವು 2029ರಲ್ಲಾಗುವ ಮುಂದಿನ ರಾಷ್ಟ್ರೀಯ ಚುನಾವಣೆಗೂ ಮುನ್ನ ಮತದಾನದ ವಯಸ್ಸನ್ನು 18ರಿಂದ 16ಕ್ಕೆ ಇಳಿಸಲು ನಿರ್ಧರಿಸಿದೆ. * ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ತೆಗೆದುಕೊಳ್ಳಲಾದ ಕ್ರಮವಾಗಿದೆ.* ಲೇಬರ್ ಪಕ್ಷವು 2024ರ ಚುನಾವಣೆಗೆ ಮುನ್ನವೇ ಈ ಬದಲಾವಣೆಗಾಗಿ ಪ್ರತಿಜ್ಞೆ ಮಾಡಿತ್ತು. ಈಗಾಗಲೇ ಸ್ಕಾಟ್ಲೆಂಡ್ ಮತ್ತು ವೇಲ್ಸ್ನಲ್ಲಿ 16-17 ವರ್ಷದವರು ಸ್ಥಳೀಯ ಮತ್ತು ಪ್ರಾದೇಶಿಕ ಚುನಾವಣೆಯಲ್ಲಿ ಮತ ಹಾಕುವ ಅವಕಾಶ ಹೊಂದಿದ್ದಾರೆ.* ಈ ಹಿಂದೆ ಈಕ್ವೆಡಾರ್, ಆಸ್ಟ್ರಿಯಾ ಮತ್ತು ಬ್ರೆಜಿಲ್ ದೇಶಗಳು 16ನೇ ವಯಸ್ಸಿಗೆ ಮತದಾನದ ಹಕ್ಕು ನೀಡಿದ್ದವು. ಇದೀಗ ಬ್ರಿಟನ್ ಕೂಡ ಆ ಸಾಲಿಗೆ ಸೇರುವ ಸಾಧ್ಯತೆ ಇದೆ.* ಈ ಬದಲಾವಣೆ ಅಳವಡಿಸಲು ಬ್ರಿಟನ್ ಸಂಸತ್ತಿನ ಅಂಗೀಕಾರ ಅಗತ್ಯವಿದೆ.