Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
BRICS 2026ಕ್ಕೆ ಭಾರತದ ಆತಿಥ್ಯ: ಲೋಗೋ–ಥೀಮ್ ಅನಾವರಣಗೊಳಿಸಿದ ಎಸ್. ಜೈಶಂಕರ್
14 ಜನವರಿ 2026
➤ ಭಾರತವು 2026ರ ಸಾಲಿನ ಬ್ರಿಕ್ಸ್ (BRICS) ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಜ್ಜಾಗುತ್ತಿದ್ದು, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ (13-01-2026) ನವದೆಹಲಿಯಲ್ಲಿ ಈ ಸಂಬಂಧಿತ ಅಧಿಕೃತ ಲೋಗೋ (Logo), ವೆಬ್ಸೈಟ್ ಮತ್ತು ಥೀಮ್ (Theme) ಅನ್ನು ಅನಾವರಣಗೊಳಿಸಿದರು.
ಈ ಮೂಲಕ ಭಾರತದ ದೃಷ್ಟಿಕೋನ, ಆದ್ಯತೆಗಳು ಮತ್ತು ಜಾಗತಿಕ ಬದ್ಧತೆಯನ್ನು ವಿಶ್ವದ ಮುಂದೆ ಸ್ಪಷ್ಟಪಡಿಸಿದ್ದಾರೆ. ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಈ ಅಧ್ಯಕ್ಷತೆ ದೊರೆತಿರುವುದು ವಿಶೇಷ ಮಹತ್ವವನ್ನು ಹೊಂದಿದೆ.
➤
ಧ್ಯೇಯವಾಕ್ಯ (Theme):
ಭಾರತದ ಅಧ್ಯಕ್ಷತೆಯ ಅಧಿಕೃತ ಘೋಷವಾಕ್ಯ
'Building for Resilience, Innovation, Cooperation and Sustainability'
(ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ).
➤
ಲೋಗೋದ ವೈಶಿಷ್ಟ್ಯ:
* ಲೋಗೋದಲ್ಲಿನ ದಳಗಳು ಸದಸ್ಯ ರಾಷ್ಟ್ರಗಳ ಬಣ್ಣಗಳನ್ನು ಪ್ರತಿನಿಧಿಸುತ್ತಿದ್ದು, ಏಕತೆಯನ್ನು ಸಾರುತ್ತವೆ. ಮಧ್ಯದಲ್ಲಿರುವ
'ನಮಸ್ತೆ'
ಮುದ್ರೆಯು ಭಾರತದ ಅತಿಥಿ ಸತ್ಕಾರ, ಗೌರವ ಮತ್ತು ಸಾಮರಸ್ಯದ ಸಂಕೇತವಾಗಿದೆ.
➤ ಬ್ರಿಕ್ಸ್ ಒಕ್ಕೂಟ:
ಹಿಂದೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬ ಐದು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಬ್ರಿಕ್ಸ್ ಇದೀಗ ವಿಸ್ತಾರಗೊಂಡ ಜಾಗತಿಕ ವೇದಿಕೆಯಾಗುತ್ತಿದೆ. 2024–25ರ ಅವಧಿಯಲ್ಲಿ
ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುಎಇ ಮತ್ತು ಇಂಡೋನೇಷ್ಯಾ
ಹೊಸ ಸದಸ್ಯರಾಗಿ ಸೇರಿಕೊಂಡಿವೆ. ಇದಲ್ಲದೆ,
ಬೆಲಾರಸ್, ವಿಯೆಟ್ನಾಂ, ಥೈಲ್ಯಾಂಡ್ ಸೇರಿದಂತೆ 10 ರಾಷ್ಟ್ರಗಳು
2025ರಲ್ಲಿ ಪಾಲುದಾರ ರಾಷ್ಟ್ರಗಳಾಗಿ ಸೇರ್ಪಡೆಗೊಂಡಿದ್ದು, ಬ್ರಿಕ್ಸ್ನ ಜಾಗತಿಕ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿದೆ.
➤ ಭಾರತದ ಅಧ್ಯಕ್ಷತೆಯ ಮೂರು ಪ್ರಮುಖ ಸ್ತಂಭಗಳು:
ಭಾರತವು ತನ್ನ ಬ್ರಿಕ್ಸ್ ಅಧ್ಯಕ್ಷತಾ ಅವಧಿಯಲ್ಲಿ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ:
1.
ರಾಜಕೀಯ ಮತ್ತು ಭದ್ರತೆ
– ಭಯೋತ್ಪಾದನೆ ವಿರುದ್ಧದ ಹೋರಾಟ, ಶಾಂತಿ ಸ್ಥಾಪನೆ ಮತ್ತು ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ.
2.
ಆರ್ಥಿಕ ಮತ್ತು ಹಣಕಾಸು
– ವ್ಯಾಪಾರ ವೃದ್ಧಿ, ಹೂಡಿಕೆ ಉತ್ತೇಜನ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿ.
3.
ಸಾಂಸ್ಕೃತಿಕ ಮತ್ತು ಜನಸಂಪರ್ಕ
– ಕ್ರೀಡೆ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು.
➤
2025ರ ರಿಯೋ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದಂತೆ,
“Humanity First” (ಮಾನವೀಯತೆ ಮೊದಲು)
ಎಂಬ ತತ್ವದಡಿ ಭಾರತವು 2026ರಲ್ಲಿ ಬ್ರಿಕ್ಸ್ ಮೂಲಕ ಜಾಗತಿಕ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ಸಹಕಾರ, ಸಮಾವೇಶ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದೇಶದೊಂದಿಗೆ, ಭಾರತದ ಬ್ರಿಕ್ಸ್ ಅಧ್ಯಕ್ಷತೆ ವಿಶ್ವ ರಾಜಕಾರಣದಲ್ಲಿ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.
➤ ಬ್ರಿಕ್ಸ್ (BRICS) ಹಿನ್ನೆಲೆ:
-
ಸ್ಥಾಪನೆ:
2006ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಬ್ರಿಕ್ (BRIC) ಔಪಚಾರಿಕವಾಗಿ ಚಾಲನೆ ಪಡೆಯಿತು.
-
ಮೊದಲ ಶೃಂಗಸಭೆ:
2009ರಲ್ಲಿ ರಷ್ಯಾದ ಯೆಕಟೆರಿನ್ಬರ್ಗ್ನಲ್ಲಿ ನಡೆಯಿತು.
-
ವಿಸ್ತರಣೆ:
2010ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯೊಂದಿಗೆ ಇದು 'BRICS' ಆಯಿತು. 2024 ಮತ್ತು 2025ರಲ್ಲಿ ಹಂತ ಹಂತವಾಗಿ ಹೊಸ ರಾಷ್ಟ್ರಗಳು ಸೇರ್ಪಡೆಗೊಂಡಿವೆ. ಪ್ರಸ್ತುತ ಬ್ರಿಕ್ಸ್ನಲ್ಲಿ ಭಾರತ, ಬ್ರೆಜಿಲ್, ಚೀನಾ, ರಷ್ಯಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುಎಇ ಮತ್ತು ಇಂಡೋನೇಷ್ಯಾ ಸೇರಿದಂತೆ
11 ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಿವೆ.
Take Quiz
Loading...