* ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಪವಿತ್ರ ದೇವಾಲಯದ ಪಟ್ಟಣವಾದ ಓಂಕಾರೇಶ್ವರದಲ್ಲಿ ಸೆಪ್ಟೆಂಬರ್ 18 ರಂದು ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ* ಇಂದೋರ್‌ (Indor) ನಗರದಿಂದ ನರ್ಮದಾ ನದಿಯ ದಡದಲ್ಲಿ ಸುಮಾರು 80 ಕಿಮೀ ದೂರದಲ್ಲಿರುವ ಓಂಕಾರೇಶ್ವರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಲಾಗಿದೆ. ಆದಿ ಶಂಕರಾಚಾರ್ಯರ 12 ವರ್ಷದ ಬಾಲಕನ ಪ್ರತಿಮೆ ಇದಾಗಿದ್ದು, ಬಹುವಿಧದ ಲೋಹಗಳನ್ನು ಒಳಗೊಂಡಿದೆ. * ಬಹು-ಲೋಹದ ಸ್ಮಾರಕದಲ್ಲಿ ಆದಿ ಶಂಕರಾಚಾರ್ಯರನ್ನು 12 ವರ್ಷದ ಬಾಲಕನಾಗಿ ತೋರಿಸಲಾಗಿದೆ. ಅಪೂರ್ಣಗೊಂಡಿರುವ ಯೋಜನೆಯ ವಿಡಿಯೋವನ್ನು ಮಧ್ಯಪ್ರದೇಶ ಸರ್ಕಾರ ಸೆಪ್ಟೆಂಬರ್ 13 ರಂದು ಬಿಡುಗಡೆ ಮಾಡಿದೆ.