* ಭಾರತವು ಮುಂದಿನ ವರ್ಷಗಳಲ್ಲಿ ತನ್ನ ಮೊದಲ ನದಿಯಡಿ ರಸ್ತೆ ಸುರಂಗವನ್ನು ಪಡೆಯಲಿದ್ದು, ಇದು ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ನದಿಯಡಿ ನಿರ್ಮಾಣವಾಗಲಿದೆ.* ಸುಮಾರು ₹6,000 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ನಿರೀಕ್ಷೆಯಲ್ಲಿದೆ.* ಯೋಜನೆ ನುಮಾಲಿಗಢ್ ಮತ್ತು ಗೋಪುರ್ ನಡುವೆ 33.7 ಕಿಮೀ ಉದ್ದದಲ್ಲಿರಲಿದೆ, ಇದರಲ್ಲಿ ಸುರಂಗ ಹಾಗೂ ಸಂಪರ್ಕ ರಸ್ತೆಗಳು ಸೇರಿವೆ.* ಸುರಂಗವು ನದಿಯ ಅಡಿಯಲ್ಲಿ ಸುಮಾರು 32 ಮೀಟರ್ ಆಳದಲ್ಲಿ ನಿರ್ಮಾಣವಾಗಲಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಐದು ವರ್ಷಗಳು ಬೇಕಾಗುವ ಸಾಧ್ಯತೆ ಇದೆ.* ರಸ್ತು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ತಯಾರಿಸಿದ ಡಿಪಿಆರ್ನ್ನು NHIDCL ತಾಂತ್ರಿಕವಾಗಿ ಪರಿಶೀಲಿಸಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಯೋಜನೆಗೆ ಅನುಮೋದನೆ ನೀಡಿದ್ದು, ಭೂಕಂಪೀಯ ಮತ್ತು ಭೂಗರ್ಭ ಜಲ ಅಧ್ಯಯನ ಮಾಡಲು ಸೂಚಿಸಿದೆ.* ಈ ಸುರಂಗ ಯೋಜನೆಗೆ ತಂತ್ರತ್ಮಕ ಹಾಗೂ ಭದ್ರತಾ ಮಹತ್ವವಿದ್ದು, ಅರುಣಾಚಲ ಪ್ರದೇಶದ ಚೀನಾ ಗಡಿಯ ಸಮೀಪದಲ್ಲಿರುವುದರಿಂದ ಇದು ರಕ್ಷಣಾ ದೃಷ್ಟಿಯಿಂದ ಸಹ ಪ್ರಮುಖವಾಗಿದೆ.* ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬ್ರಹ್ಮಪುತ್ರಾ ನದಿಯಡಿ ಸುರಂಗ ನಿರ್ಮಾಣವನ್ನು ರಾಜ್ಯದ ಕನಸಾಗಿ ವರ್ಣಿಸಿದ್ದಾರೆ.