* ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಆಯೋಜಿಸಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ನವೆಂಬರ್ 18-19 ರವರೆಗೆ ರಿಯೊ ಡಿ ಜನೈರೊಗೆ ಭೇಟಿ ನೀಡಲಿದ್ದಾರೆ.* 2024 ರ ಶೃಂಗಸಭೆಯ ವಿಷಯವು / ಥೀಮ್:-  'ಬಿಲ್ಡಿಂಗ್ ಎ ಜಸ್ಟ್ ವರ್ಲ್ಡ್ ಅಂಡ್ ಎ ಸಸ್ಟೈನಬಲ್ ಪ್ಲಾನೆಟ್' ["Building a just world and a sustainable planet".] ಆಗಿದೆ.* ನವೆಂಬರ್ 16 ರಿಂದ 21, 2024 ರವರೆಗೆ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಅಂತರರಾಷ್ಟ್ರೀಯ ಭೇಟಿಯನ್ನು ಕೈಗೊಳ್ಳಲಿದ್ದಾರೆ.* ಭಾರತವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಜಿ 20 ಟ್ರೋಕಾದ ಭಾಗವಾಗಿದೆ. ಪ್ರಧಾನಿ ಮೋದಿಯವರ ಮೊದಲ ಗಮ್ಯಸ್ಥಾನ ನೈಜೀರಿಯಾ ಆಗಿದ್ದು, 17 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಸಂಪನ್ಮೂಲ-ಸಮೃದ್ಧ ಆಫ್ರಿಕನ್ ದೇಶಕ್ಕೆ ಇದು ಮೊದಲ ಭೇಟಿಯಾಗಿದೆ.* ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನವೆಂಬರ್ 16 ರಿಂದ 17 ರವರೆಗೆ ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. * ಇನ್ನೂ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅವರ ಅಂತಿಮ ನಿಲುಗಡೆ ನವೆಂಬರ್ 19 ರಿಂದ 21 ರವರೆಗೆ ಗಯಾನಾದಲ್ಲಿ ಇರುತ್ತದೆ. ಈ ಭೇಟಿಯು 1968 ರ ನಂತರ ಗಯಾನಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.*  2023 ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 17 ನೇ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರನ್ನು ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಿದ್ದರು, ಆಗ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಸಹ ನೀಡಲಾಯಿತು.* ಗಯಾನಾದ ಜಾರ್ಜ್‌ಟೌನ್‌ನಲ್ಲಿ, ಪ್ರಧಾನಮಂತ್ರಿಯವರು ಎರಡನೇ ಕ್ಯಾರಿಕೋಮ್-ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ, ಇದು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಭಾರತದ ದೀರ್ಘಾವಧಿಯ ಪಾಲುದಾರಿಕೆಯನ್ನು ಬಲಪಡಿಸುವ ವೇದಿಕೆಯಾಗಿದೆ.