* ಸುಸ್ಥಿರ ಕೃಷಿ ನಾವಿನ್ಯತೆಗಾಗಿ ಬ್ರೆಜಿಲಿಯನ್ ವಿಜ್ಞಾನಿ ಮರಿಯಂಗೇಲಾ ಹಂಗ್ರಿಯಾ 2025 ರ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಅವರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಬೆಳೆ ಇಳುವರಿ ಹಾಗೂ ಪೋಷಣೆಯನ್ನು ಹೆಚ್ಚಿಸುವ ಜೈವಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ.* ಹಂಗ್ರಿಯಾ ಅವರು ಎಂಬ್ರಾಪಾನಲ್ಲಿ 40 ವರ್ಷಗಳ ಸೇವೆಯಲ್ಲಿ ಜೈವಿಕ ಇನಾಕ್ಯುಲಂಟ್ಗಳು (ಬ್ಯಾಕ್ಟೀರಿಯಾ) ಮೂಲಕ ಸೋಯಾಬೀನ್, ಗೋಧಿ, ಬೀನ್ಸ್, ಮೆಕ್ಕೆಜೋಳ ಮೊದಲಾದ ಬೆಳೆಗಳ ಇಳುವರಿ ಹೆಚ್ಚಿಸಲು ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.* ಈ ತಂತ್ರಜ್ಞಾನಗಳಿಂದ ರೈತರು ವರ್ಷಕ್ಕೆ ಸುಮಾರು $40 ಶತಕೋಟಿ ವೆಚ್ಚ ಉಳಿತಾಯ ಮಾಡುತ್ತಿದ್ದಾರೆ.* ಅವರು ಬೆಳೆಗಳಿಗೆ ಸಾರಜನಕ ಪೂರೈಕೆ ಮಾಡುವ ಸೂಕ್ಷ್ಮಜೀವಿಗಳ ಮೇಲಿನ ಸಂಶೋಧನೆಗೆ ಹೆಸರಾಗಿದ್ದಾರೆ.* ಹಂಗ್ರಿಯಾ ಅಭಿವೃದ್ಧಿಪಡಿಸಿದ ಇನಾಕ್ಯುಲಂಟ್ಗಳು ಈಗ 15 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬಳಸಲಾಗುತ್ತಿವೆ.* ಅಜೋಸ್ಪಿರಿಲ್ಲಮ್ ಬ್ರೆಸಿಲೆನ್ಸ್ ಮತ್ತು ರೈಜೋಬಿಯಾ ಎಂಬ ಬ್ಯಾಕ್ಟೀರಿಯಾಗಳ ಸಂಯೋಜಿತ ಬಳಕೆ ಇಳುವರಿ ದ್ವಿಗುಣಗೊಳಿಸುವಲ್ಲಿ ಸಹಾಯಕವಾಗಿದೆ.* ಇತ್ತೀಚೆಗಷ್ಟೇ ಅವರು ಈ ತಂತ್ರಜ್ಞಾನಗಳನ್ನು ಹುಲ್ಲುಗಾವಲು ಪುನಶ್ಚೇತನ ಮತ್ತು ಮೇವು ಗುಣಮಟ್ಟ ಸುಧಾರಣೆಗೆ ಬಳಸುತ್ತಿದ್ದಾರೆ.