* ಯೂಟ್ಯೂಬ್ ಶಾರ್ಟ್ಸ್, ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಫೇಸ್ಬುಕ್ ವೀಡಿಯೊಗಳನ್ನು ಸ್ಕ್ರೋಲ್ ಮಾಡಲು ನೀವು ಎಷ್ಟು ಸಮಯವನ್ನು ಕಳೆಯುತ್ತೀರಿ. ಈ ಬುದ್ದಿಹೀನ ಸ್ಕ್ರೋಲಿಂಗ್ ಈಗ ಆಕ್ಸ್ಫರ್ಡ್ ನಿಘಂಟಿನಲ್ಲಿ "ಬ್ರೈನ್ ರಾಟ್"('ಮೆದುಳು ಕೊಳೆತ') ಎಂಬ ಪದವನ್ನು ಹೊಂದಿದೆ. * "ಬ್ರೈನ್ ರಾಟ್ " ಅನ್ನು 2024 ರ ವರ್ಷದ ಆಕ್ಸ್ಫರ್ಡ್ ಪದ ಎಂದು ಹೆಸರಿಸಲಾಗಿದೆ. ಕೆಲಸಗಳ ಮಧ್ಯೆ ಪದೇ ಪದೇ ಮೊಬೈಲ್ ನೋಡುವುದು, 1 ಬೈಟ್ ನಷ್ಟಿದ್ದರೂ ವೀಡಿಯೋಗಳನ್ನು ಸ್ಕಿಪ್ ಮಾಡುತ್ತಾ ಗಂಟೆಗಟ್ಟಲೆ ಕಳೆಯುವುದನ್ನು “ಬ್ರೈನ್ ರಾಟ್’ ಎಂಬ ಪದದಿಂದ ಗುರುತಿಸಲಾಗುತ್ತಿದೆ.* ಈ ಪದವು 2023 ಮತ್ತು 2024ರ ನಡುವೆ ಬಳಕೆಯ ಆವರ್ತನದಲ್ಲಿ 230% ರಷ್ಟು ಹೆಚ್ಚಾಗಿದೆ ಎಂದು ಆಕ್ಸ್ಫರ್ಡ್ ಸಂಸ್ಥೆ ಹೇಳಿದೆ.* 2024 ರ ಆಕ್ಸ್ಫರ್ಡ್ನ ವರ್ಷದ ಪದವು ಬ್ರೈನ್ ರಾಟ್ ('ಮೆದುಳು ಕೊಳೆತ') ಆಗಿದೆ, ಇದು ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯ ಪರಿಣಾಮ ಮತ್ತು ಆನ್ಲೈನ್ನಲ್ಲಿ ಮನಸ್ಸಿಗೆ ಮುದ ನೀಡುವ ವಿಷಯದ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.* 'ಮೆದುಳಿನ ಕೊಳೆತ'ವನ್ನು "ವ್ಯಕ್ತಿಯ ಮಾನಸಿಕ ಅಥವಾ ಬೌದ್ಧಿಕ ಸ್ಥಿತಿಯ ಹದಗೆಡಿಸುವಿಕೆ ಎಂದು ವ್ಯಾಖ್ಯಾನಿಸಲಾಗಿದೆ, ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಆನ್ಲೈನ್ನಲ್ಲಿ ಹೆಚ್ಚು ಕಾಲ ಕಳೆಯುವ ಮೂಲಕ ಸಾಮಾನ್ಯ ಜೀವನದಿಂದ ವಿಮುಖವಾಗುವುದನ್ನು ಸೂಚಿಸುತ್ತದೆ.* ಬಿಬಿಸಿ ವರದಿಯೊಂದು ಈ ಪದಗುಚ್ಛದ ಜನಪ್ರಿಯತೆಯು "ನಾವು ವಾಸಿಸುತ್ತಿರುವ ಸಮಯದ ಲಕ್ಷಣ" ಎಂದು ಹೇಳಿದೆ.* 2023, 2022 ಮತ್ತು 2021 ರಲ್ಲಿ ಕ್ರಮವಾಗಿ 'ರಿಜ್', 'ಗಾಬ್ಲಿನ್ ಮೋಡ್' ಮತ್ತು 'ವ್ಯಾಕ್ಸ್' ಎಂಬ ವರ್ಷದ ಆಕ್ಸ್ಫರ್ಡ್ ಪದಗಳಾಗಿವೆ.