* ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಪ್ರಮುಖ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ (BIETC) ಹೊಸ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ (VP & MD) ಆಗಿ ಸ್ಟೇಸಿ ಸೈರ್ ಅವರನ್ನು ನೇಮಿಸಲಾಗಿದೆ. ಇದರ ಜೊತೆಗೆ, ಅವರು ಬೋಯಿಂಗ್ ಇಂಡಿಯಾದ ಮುಖ್ಯ ಎಂಜಿನಿಯರ್ ಆಗಿಯೂ ಸೇವೆ ಸಲ್ಲಿಸಲಿದ್ದಾರೆ. * 28 ವರ್ಷಗಳ ಬೋಯಿಂಗ್ ಅನುಭವ ಹೊಂದಿರುವ ಸೈರ್ ಏಪ್ರಿಲ್ 2021 ರಿಂದ ಜನವರಿ 2025 ರವರೆಗೆ ಈ ಹುದ್ದೆಯನ್ನು ಮುನ್ನಡೆಸಿದ್ದ ಅಹ್ಮದ್ ಎಲ್ಶೆರ್ಬಿನಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. * 787, 767 ಮತ್ತು 777 ನಂತಹ ವಿಮಾನ ಕಾರ್ಯಕ್ರಮಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಸೈರ್ ತನ್ನ ಹೊಸ ಪಾತ್ರಕ್ಕೆ ಬಲವಾದ ನಾಯಕತ್ವ ಮತ್ತು ಎಂಜಿನಿಯರಿಂಗ್ ಹಿನ್ನೆಲೆಯನ್ನು ತರುತ್ತಾರೆ, ಇದು ಬೋಯಿಂಗ್ನ ದೀರ್ಘಕಾಲೀನ ಕಾರ್ಯತಂತ್ರ ಮತ್ತು ಭಾರತದಲ್ಲಿ ಬೆಳವಣಿಗೆಗೆ ನಿರ್ಣಾಯಕವಾಗಿದೆ.* ರಚನಾತ್ಮಕ ನಾವೀನ್ಯತೆಗಳು ಸೇರಿದಂತೆ ಬೋಯಿಂಗ್ 787 ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 767 ಮತ್ತು 777 ವಿಮಾನ ಕಾರ್ಯಕ್ರಮಗಳಲ್ಲಿ ಹಿರಿಯ ಎಂಜಿನಿಯರಿಂಗ್ ಮತ್ತು ನಾಯಕತ್ವವನ್ನು ನಿಭಾಯಿಸಿದ ಅನುಭವವನ್ನು ಹೊಂದಿದ್ದಾರೆ. ಇತ್ತೀಚೆಗೆ 20 ಜಾಗತಿಕ ಉತ್ಪಾದನಾ ತಾಣಗಳಲ್ಲಿ ಫ್ಯಾಬ್ರಿಕೇಶನ್ ಎಂಜಿನಿಯರಿಂಗ್ ಅನ್ನು ಕೂಡ ಮುನ್ನಡೆಸಿದ್ದಾರೆ.* ಸೈರ್ ಅವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ - ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಎಂಬಿಎ - ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, 2015 ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಅನ್ನು ಪೂರ್ಣಗೊಳಿಸಿದ್ದಾರೆ.