* ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಸಹಾಯಕ ಆಯುಕ್ತರಾಗಿ 25 ವರ್ಷದ ಹಿಂದೂ ಮಹಿಳೆ ಕಾಶಿಶ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ.* ಈ ಸ್ಥಾನಕ್ಕೇರಿದ ಮೊದಲ ಅಲ್ಪಸಂಖ್ಯಾತ ಹಿಂದೂ ಮಹಿಳೆ ಎಂಬ ವಿಶೇಷ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.* ಬಲೂಚಿಸ್ತಾನದ ಚಗೈ ಜಿಲ್ಲೆಯ ದೂರದ ಪಟ್ಟಣವಾದ ನೋಶಿಯಿಂದ ಬಂದಿರುವ ಕಾಶಿಶ್, ಬಿಪಿಎಸ್ಸಿ (ಬಲೂಚಿಸ್ತಾನ ಸಾರ್ವಜನಿಕ ಸೇವಾ ಆಯೋಗ) ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.* ಇತ್ತೀಚಿನ ಕಾಲದಲ್ಲಿ ಪಾಕಿಸ್ತಾನದ ಹಿಂದೂ ಸಮುದಾಯದ ಮಹಿಳೆಯರು, ಪುರುಷರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿ ಗಮನ ಸೆಳೆಯುತ್ತಿದ್ದಾರೆ.* 2022ರ ಜುಲೈ ತಿಂಗಳಲ್ಲಿ ಮಣೇಶ್ ರೋಪೆಟಾ ಕರಾಚಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಅವರು ಈ ಹುದ್ದೆಗೆ ನೇಮಕವಾದ ಮೊದಲ ಹಿಂದೂ ಮಹಿಳೆಯಾಗಿದ್ದರು.* 2019ರಲ್ಲಿ ಶಹದದ್ ಕೋಟ್ (ಸಿಂಥ್ ಪ್ರಾಂತ್ಯ)ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಸುಮನ್ ಪವನ್ ಬೋದಾನಿ, ಇದೀಗ ಹೈದರಾಬಾದ್ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.