* ಕೇಂದ್ರ ಸಚಿವ ಸಂಪುಟವು ಕರ್ನಾಟಕದ ಬಳ್ಳಾರಿ–ಚಿಕ್ಕಜಾಜೂರು ನಡುವಿನ 185 ಕಿ.ಮೀ. ರೈಲ್ವೆ ಜೋಡಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. * ಈ ಯೋಜನೆಯು ಬಳ್ಳಾರಿ, ಚಿತ್ರದುರ್ಗ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಜೊತೆಗೆ, ಜಾರ್ಖಂಡ್ನ ಕೊಡೆರ್ಮಾ–ಬರ್ಕಕಾನಾ ಮಾರ್ಗದ ಜೋಡಿ ಮಾರ್ಗಕ್ಕೂ ಅನುಮೋದನೆ ನೀಡಲಾಗಿದೆ.* ಈ ಜೋಡಿ ಮಾರ್ಗ ಯೋಜನೆಯು ಹೈದರಾಬಾದ್ ಹಾಗೂ ಮಂಗಳೂರು ಬಂದರು ನಡುವಿನ ರೈಲು ಸಂಪರ್ಕವನ್ನು ಸುಧಾರಿಸಲಿದೆ. ಇದರಿಂದ ಹೊಸಪೇಟೆ-ಬಳ್ಳಾರಿ ಕೈಗಾರಿಕಾ ಪ್ರದೇಶ ಹಾಗೂ ಬಳ್ಳಾರಿ-ಚಿತ್ರದುರ್ಗ ಗಣಿಗಾರಿಕೆ ಪ್ರದೇಶಗಳ ನಡುವೆ ಸಂಪರ್ಕ ಬಲಪಡಿಸಲಿದೆ. * ಯೋಜನೆಯು ಸುಮಾರು 1,408 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿ, ಸುಮಾರು 28.19 ಲಕ್ಷ ಜನರಿಗೆ ಲಾಭವಾಗಲಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ, ತೈಲ ಆಮದನ್ನು ಕಡಿಮೆ ಮಾಡಿ ಮಾಲಿನ್ಯವನ್ನು ತಗ್ಗಿಸಲಿದೆ.* ಈ ಯೋಜನೆಯು ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕನಸಿನ ಭಾಗವಾಗಿದ್ದು, ಜನರ ಓಡಾಟ ಹಾಗೂ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲಿದೆ.* ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪ್ರಕಾರ, ಜೋಡಿ ಮಾರ್ಗದ ಮೂಲಕ ಕಬ್ಬಿಣದ ಅದಿರು, ಉಕ್ಕು, ರಸಗೊಬ್ಬರ, ಕೃಷಿ ಉತ್ಪನ್ನಗಳಂತಹ ಸರಕುಗಳ ಸಾಗಣೆ ಸುಲಭವಾಗಲಿದೆ. ಇದಲ್ಲದೆ, ಹೊಸ ಮಾರ್ಗದಿಂದ ವರ್ಷಕ್ಕೆ 18.9 ದಶಲಕ್ಷ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ.* ಹೈದರಾಬಾದ್, ಬಳ್ಳಾರಿ, ಹಂಪಿ, ಜೋಗ ಜಲಪಾತ, ಅಂಜನಾದ್ರಿ ಮತ್ತಿತರ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಸುಲಭವಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಈ ಜೋಡಿ ಮಾರ್ಗವು ಸಾರಿಗೆ, ಕೈಗಾರಿಕೋದ್ಯಮ ಹಾಗೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರವಹಿಸಲಿದೆ.