Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಟಿಸಿಎಸ್ ವಿಶ್ವ 10ಕೆ ಬೆಂಗಳೂರು 2026: ರಾಯಭಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಬ್ಲಾಂಕಾ ಪ್ಲಾಸಿಕ್ ನೇಮಕ
Authored by:
Akshata Halli
Date:
7 ಎಪ್ರಿಲ್ 2026
➤
ಬೆಂಗಳೂರು:
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕ್ರೀಡಾಕೂಟವಾದ
'ಟಿಸಿಎಸ್ ವಿಶ್ವ 10ಕೆ ಬೆಂಗಳೂರು' (TCS World 10K Bengaluru)
ನ 18ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಓಟದ ಸ್ಪರ್ಧೆಗೆ ಅಂತರರಾಷ್ಟ್ರೀಯ ರಾಯಭಾರಿಯಾಗಿ ಕ್ರೊವೇಷ್ಯಾದ ಹೈಜಂಪ್ ದಿಗ್ಗಜ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ
ಬ್ಲಾಂಕಾ ಪ್ಲಾಸಿಕ್ (Blanka Vlasic)
ಅವರನ್ನು ನೇಮಕ ಮಾಡಲಾಗಿದೆ.
ವಿಶ್ವ ಅಥ್ಲೆಟಿಕ್ಸ್ನಿಂದ 'ಗೋಲ್ಡ್ ಲೇಬಲ್ ರೇಸ್' ಮಾನ್ಯತೆ ಪಡೆದಿರುವ, ಒಟ್ಟು ₹1.97 ಕೋಟಿ ($235,000) ಬಹುಮಾನ ಮೊತ್ತದ 18ನೇ ಆವೃತ್ತಿಯ 'ಟಿಸಿಎಸ್ ವಿಶ್ವ 10ಕೆ ಬೆಂಗಳೂರು' ಓಟದ ಸ್ಪರ್ಧೆಯು ಇದೇ
ಏಪ್ರಿಲ್ 26, 2026 ರಂದು ಸಿಲಿಕಾನ್ ಸಿಟಿಯಲ್ಲಿ ನಡೆಯಲಿದೆ.
➤
ಬ್ಲಾಂಕಾ ಪ್ಲಾಸಿಕ್
ವಿಶ್ವ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹೈಜಂಪ್ ಪಟುಗಳಲ್ಲಿ ಒಬ್ಬರು. ಅವರ ಪ್ರಮುಖ ಸಾಧನೆಗಳು ಇಂತಿವೆ:
- ಒಲಿಂಪಿಕ್ ಸಾಧನೆ:
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಮತ್ತು 2016ರ ರಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
- ವಿಶ್ವ ದಾಖಲೆಯ ಸಮೀಪ:
2009 ರಲ್ಲಿ ಅವರು ನಿರ್ಮಿಸಿದ 2.08 ಮೀಟರ್ ಹೈಜಂಪ್ ದಾಖಲೆಯು ಕ್ರೊವೇಷ್ಯಾದ ರಾಷ್ಟ್ರೀಯ ದಾಖಲೆಯಾಗಿದ್ದು, ಇದು ಸಾರ್ವಕಾಲಿಕ ಎರಡನೇ ಅತ್ಯುತ್ತಮ ಜಂಪ್ ಆಗಿದೆ.
- ಪ್ರಶಸ್ತಿಗಳು:
ಅವರು ವಿಶ್ವ ಚಾಂಪಿಯನ್ಷಿಪ್ ಮತ್ತು ವಿಶ್ವ ಒಳಾಂಗಣ ಚಾಂಪಿಯನ್ಷಿಪ್ಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
- ಗೌರವ:
2010 ರಲ್ಲಿ 'ವರ್ಲ್ಡ್ ಅಥ್ಲೆಟ್ ಆಫ್ ದಿ ಇಯರ್' ಗೌರವಕ್ಕೆ ಪಾತ್ರರಾಗಿದ್ದರು.
➤
"ವಿಶ್ವ 10ಕೆ ಬೆಂಗಳೂರು ಓಟದ ಭಾಗವಾಗುತ್ತಿರುವುದು ನನಗೆ ಹೆಮ್ಮೆಯ ವಿಷಯ. ಸಾವಿರಾರು ಜನರನ್ನು ಒಂದೆಡೆ ಸೇರಿಸುವ ಈ ಕ್ರೀಡಾಕೂಟವು ಕೇವಲ ಓಟವಲ್ಲ, ಬದಲಾಗಿ ಇದು ಶಕ್ತಿ ಮತ್ತು ಸ್ಫೂರ್ತಿಯ ಸಂಕೇತ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಇಂತಹ ಚಟುವಟಿಕೆಗಳು ಇಂದಿನ ದಿನಗಳಲ್ಲಿ ಅತ್ಯಗತ್ಯ," ಎಂದು ಬ್ಲಾಂಕಾ ಪ್ಲಾಸಿಕ್ ಹರ್ಷ ವ್ಯಕ್ತಪಡಿಸಿದ್ದಾರೆ.
Take Quiz
Loading...