* ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಗುರುವಾರ(ಏಪ್ರಿಲ್ 03) ಥಾಯ್ಲೆಂಡ್ಗೆ ಆಗಮಿಸಿದ್ದು, ‘ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸಂಘಟನೆ’ (BIMSTEC) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. * ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಥಾಯ್ಲೆಂಡ್ನ ಪ್ರಧಾನಿ ಪೆಟೊಂತಾರ್ನ್ ಶಿನೊವಾರ್ಥ್ ಹಾಗೂ ರಾಜ ಮಹಾ ವಾಜಿರಲೊಂಗ್ಕೋರ್ನ್ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ, ಥಾಯ್ಲೆಂಡ್ನ ಭಾರತೀಯ ಸಮುದಾಯ ಅವರಿಗೂ ಆತ್ಮೀಯ ಸ್ವಾಗತ ನೀಡಲಿದೆ. ಮೋದಿ ಅವರು ಶುಕ್ರವಾರ ಬೆಳಿಗ್ಗೆ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. * ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಮತ್ತು ಭೂತಾನ್ ಸೇರಿದಂತೆ BIMSTEC ಸದಸ್ಯ ರಾಷ್ಟ್ರಗಳ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.* ಥಾಯ್ಲೆಂಡ್ ಈ ಸಭೆಯ ಆತಿಥ್ಯ ವಹಿಸಿದ್ದು, ‘ಬ್ಯಾಂಕಾಕ್ ವಿಷನ್ 2030’ ಅನುಮೋದನೆಯಾಗುವ ನಿರೀಕ್ಷೆಯಿದೆ. * 2018 ನಂತರ ಮೊದಲ ಬಾರಿಗೆ BIMSTEC ಸದಸ್ಯ ರಾಷ್ಟ್ರಗಳ ನಾಯಕರು ಮುಖಾಮುಖಿ ಸಭೆಗೆ ಭಾಗವಹಿಸುತ್ತಿದ್ದು, 2022ರಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆದಿತ್ತು.* ಪ್ರಧಾನಿ ಮೋದಿ ಅವರ ಥಾಯ್ಲೆಂಡ್ ಹಾಗೂ ಶ್ರೀಲಂಕಾ ಪ್ರವಾಸದ ಭಾಗವಾಗಿ ಅವರು ಈಗಾಗಲೇ ಬ್ಯಾಂಕಾಕ್ಗೆ ಆಗಮಿಸಿದ್ದು, ಅಲ್ಲಿನ ಜನರು ‘ಮೋದಿ ಮೋದಿ’ ಎಂದು ಜೈಘೋಷ ಮಾಡುತ್ತಾ ಸ್ವಾಗತ ಕೋರಿದ್ದಾರೆ.* ಪ್ರಧಾನಿ ಮೋದಿ ಮತ್ತು ಥಾಯ್ಲೆಂಡ್ನ ಪ್ರಧಾನಿ ಪಟೊಂಗ್ಟಾರ್ನ್ ಶಿನವಾತ್ರ ನಡುವಿನ ಮಾತುಕತೆ ವೇಳೆ ವ್ಯಾಪಾರ ಸಂಬಂಧಿತ ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ. ಏಪ್ರಿಲ್ 4, 2025ರಂದು ನಡೆಯಲಿರುವ 6ನೇ BIMSTEC ಶೃಂಗಸಭೆಗೆ ಥಾಯ್ಲೆಂಡ್ ಅಧ್ಯಕ್ಷತೆ ವಹಿಸಲಿದೆ, ಹಾಗೂ ಪ್ರಧಾನಿ ಮೋದಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.