* ಪ್ರತಿಷ್ಠಿತ ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯ ಪ್ಲೇ-ಆಫ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಟೂರ್ನಿಯ ಪಂದ್ಯಗಳು ನವೆಂಬರ್ 14ರಿಂದ 16ರ ವರೆಗೆ ನಗರದ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.* ಪ್ಲೇ-ಆಫ್ನಲ್ಲಿ 21 ತಂಡಗಳು ಆಡಲಿದ್ದು ತಲಾ 3 ತಂಡಗಳ 7 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ತಂಡ 'ಜಿ' ಗುಂಪಿನಲ್ಲಿ ಸ್ಟೋವೇನಿಯಾ, ನೆದರ್ಲೆಂಡ್ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಗುಂಪಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯ ಲಿದ್ದು, ಇತರ ಗುಂಪುಗಳ ಪಂದ್ಯಗಳಿಗೆ ಆಯಾಯ ಗುಂಪಿನ ಒಂದು ದೇಶ ಆತಿಥ್ಯ ವಹಿಸಲಿದೆ. * ಭಾರತ ತಂಡ ಈ ಟೂರ್ನಿಯಲ್ಲಿ ಕೇವಲ 2 ಬಾರಿ ಮಾತ್ರ ಪ್ಲೇ-ಆಫ್ಗೆ ಅರ್ಹತೆ ಪಡೆದಿದೆ. ಈ ಹಿಂದೆ 2021ರಲ್ಲೂ ಟೂರ್ನಿಗೆ ಅರ್ಹತೆ ಪಡೆದುಕೊಂಡಿತ್ತು.