* ಬೀಜಿಂಗ್ನಲ್ಲಿ ನಡೆದ ಹಾಫ್ ಮ್ಯಾರಥಾನ್ನಲ್ಲಿ ವಿಶ್ವದಲ್ಲೇ ಮೊದಲ ಬಾರಿ ಮಾನವರೂಪದ ರೋಬೋಟ್ಗಳು ಮನುಷ್ಯರ ಜೊತೆ ಭಾಗವಹಿಸಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.* ಚೀನಾದಲ್ಲಿ ನಿರ್ಮಿತವಾದ 20 ಹುಮನಾಯ್ಡ್ ರೋಬೋಟ್ಗಳು ಈ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದವು. ಸೆನ್ಸಾರ್ಗಳು ಮತ್ತು ಎಐ ತಂತ್ರಜ್ಞಾನದಿಂದ ಸಜ್ಜಿತವಾಗಿದ್ದ ಈ ರೋಬೋಟ್ಗಳು ನಿಜವಾದ ಮನುಷ್ಯರಂತೆ ಓಡಿದವು.* ಎತ್ತರದಲ್ಲಿ 120 ಸೆಂ.ಮೀ ರಿಂದ 1.8 ಮೀಟರ್ವರೆಗೆ ಹೊಂದಿರುವ ಈ ರೋಬೋಟ್ಗಳು 21.1 ಕಿ.ಮೀ ದೂರವನ್ನು ಮನುಷ್ಯರ ಸಮಾನವಾಗಿ ಓಡಲು ಶಕ್ತಿಯಾದವು.* ಮನುಷ್ಯರಿಗೆ ನೀರಿನ ವ್ಯವಸ್ಥೆ ಮಾಡಿರುವಂತೆ, ರೋಬೋಟ್ಗಳಿಗಾಗಿ ಬ್ಯಾಟರಿ ಬದಲಾವಣೆಗೆ ಪಿಟ್ ಸ್ಟಾಪ್ಗಳು ಮತ್ತು ವಿಶೇಷ ಮಾರ್ಗಸೂಚಿಗಳನ್ನು ಒಳಗೊಂಡ ವ್ಯವಸ್ಥೆ ಕಲ್ಪಿಸಲಾಗಿತ್ತು.* ಇದು ಮನುಷ್ಯರ ಜೊತೆ ಪೈಪೋಟಿಯಾಗಿ ಪಾಲ್ಗೊಳ್ಳುತ್ತಿರುವ ಮೊದಲ ಅವಕಾಶವಾಗಿದ್ದು, ಹಿಂದಿನ ಮ್ಯಾರಥಾನ್ಗಳಲ್ಲಿ ರೋಬೋಟ್ಗಳು ಪ್ರತ್ಯೇಕವಾಗಿ ಓಡಿದ್ದವು.* ಸ್ಪರ್ಧೆಯಲ್ಲಿ, ಮನುಷ್ಯರಲ್ಲಿ ವೇಗವಾಗಿ ಓಡಿದವರು 1 ಗಂಟೆ 2 ನಿಮಿಷಗಳಲ್ಲಿ ಗಮ್ಯ ತಲುಪಿದರೆ, ಟಿಯಾಂಗಾಂಗ್ ಅಲ್ಟಾ ರೋಬೋಟ್ (ಬೀಜಿಂಗ್ ಇನ್ನೋವೇಶನ್ ಸೆಂಟರ್ ಆಫ್ ಹ್ಯೂಮನ್ ರೋಬೋಟಿಕ್ಸ್ನಿಂದ) 2 ಗಂಟೆ 40 ನಿಮಿಷಗಳಲ್ಲಿ ಓಟವನ್ನು ಮುಗಿಸಿತು. ಕೆಲವು ರೋಬೋಟ್ಗಳು ಆರಂಭದಲ್ಲೇ ತತ್ತರಿಸಿದರೂ, ಇನ್ನು ಕೆಲವರು ಯಶಸ್ವಿಯಾಗಿ ಗಮ್ಯ ತಲುಪಿದರು.* ಆಯೋಜಕರು ಈ ಸ್ಪರ್ಧೆಯನ್ನು ರೇಸ್ ಕಾರ್ಗಳ ಪೈಪೋಟಿಗೆ ಹೋಲಿಸಿ, ಉತ್ತಮ ನಡೆದಾಟ, ತಾಳ್ಮೆ ಮತ್ತು ನವೀನತೆಯ ಪ್ರದರ್ಶನಕ್ಕೆ ವಿವಿಧ ಪ್ರಶಸ್ತಿಗಳನ್ನು ನೀಡಿದರು.