* ಬೀಜಿಂಗ್ನಲ್ಲಿ ವಿಶ್ವ ಹುಮನಾಯ್ಡ್ ರೋಬೋಟ್ ಕ್ರೀಡಾಕೂಟವು ಗುರುವಾರ(ಆಗಸ್ಟ್ 14) ಸಂಜೆ ಅದ್ಧೂರಿಯಾಗಿ ಆರಂಭವಾಯಿತು.* ಉದ್ಘಾಟನಾ ಸಮಾರಂಭದಲ್ಲಿ ರೋಬೋಟ್ಗಳು ಹಿಪ್-ಹಾಪ್ ಡ್ಯಾನ್ಸ್, ಸಮರ ಕಲೆ ಹಾಗೂ ಸಂಗೀತ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮನರಂಜಿಸಿತು.* ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ಅಮೆರಿಕಾ, ಜರ್ಮನಿ, ಜಪಾನ್ ಸೇರಿದಂತೆ 16 ದೇಶಗಳ 280 ತಂಡಗಳಿಂದ 500 ಕ್ಕೂ ಹೆಚ್ಚು ರೋಬೋಟ್ಗಳು ಭಾಗವಹಿಸಿದ್ದು, ಸಾಕರ್, ಬಾಕ್ಸಿಂಗ್, ಓಟ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.* ಆಟದ ವೇಳೆಯಲ್ಲಿ ಕೆಲವು ರೋಬೋಟ್ಗಳು ಬೀಳುವ ಹಾಸ್ಯಕರ ಘಟನೆಗಳು ನಡೆ ದಿದ್ದು, ಫ್ಯಾಷನ್ ಶೋ, ಬ್ರೇಕ್ಡ್ಯಾನ್ಸ್ ಹಾಗೂ ಸಂಗೀತ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದವು.* ಚೀನಾದ ಪ್ರಮುಖ ರೊಬೊಟಿಕ್ಸ್ ಕಂಪನಿಗಳು, ತ್ಸಿಂಗುವಾ ಮತ್ತು ಪೀಕಿಂಗ್ ವಿಶ್ವವಿದ್ಯಾಲಯಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳೂ ಪಾಲ್ಗೊಂಡಿವೆ.* ಸಾರ್ವಜನಿಕ ಪ್ರವೇಶ ಟಿಕೆಟ್ಗಳು 180 ಯುವಾನ್ದಿಂದ 580 ಯುವಾನ್ವರೆಗೆ ನಿಗದಿಯಾಗಿತ್ತು.