* ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘವು ಜೀವ ವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೊಬೆಲ್ ಎಂದೇ ಪ್ರಸಿದ್ಧ ಯುಎನ್ಡಿಪಿ “ಈಕ್ವೇಟರ್ ಇನಿಷಿಯೇಟಿವ್” ಪ್ರಶಸ್ತಿಗೆ ಆಯ್ಕೆಯಾಗಿದೆ.* 10 ಸಾವಿರ ಡಾಲರ್ (₹8.5 ಲಕ್ಷ) ಮೊತ್ತದ ಈ ಪುರಸ್ಕಾರವನ್ನು ಭಾರತದಲ್ಲಿ ಮಹಿಳಾ ಸಂಘವೊಂದು ಮೊದಲ ಬಾರಿಗೆ ಪಡೆಯುತ್ತಿದೆ.* 2018ರಲ್ಲಿ 14 ಮಹಿಳೆಯರಿಂದ ಸ್ಥಾಪಿತವಾದ ಈ ಸಂಘವು ಪರಿಸರ ಸ್ನೇಹಿ ಕೃಷಿ, ಸಮುದಾಯ ಬೀಜ ಬ್ಯಾಂಕ್, ಸಿರಿಧಾನ್ಯ ಮಿಶ್ರ ಬೆಳೆ, ಮೌಲ್ಯವರ್ಧನೆ, ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಮಹತ್ವದ ಕೆಲಸಗಳನ್ನು ಮಾಡಿದೆ.* 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಬೇಸಾಯವನ್ನು ಪುನರುಜ್ಜೀವನಗೊಳಿಸಿದ್ದು, ಸೌರಶಕ್ತಿ ಆಧಾರಿತ ಸಿರಿಧಾನ್ಯ ಸಂಸ್ಕರಣಾ ಘಟಕ ಹಾಗೂ ದೆಸಿ ಬೀಜ ಸಂರಕ್ಷಣೆ ಇದರ ವೈಶಿಷ್ಟ್ಯವಾಗಿದೆ.* ಪ್ರಶಸ್ತಿಯನ್ನು ಅಕ್ಟೋಬರ್ 9ರಂದು ಬ್ರೆಜಿಲ್ನಲ್ಲಿ ಆನ್ಲೈನ್ ಮೂಲಕ ಪ್ರದಾನ ಮಾಡಲಾಗುತ್ತದೆ. ಈ ಗೌರವ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ.