* ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾದ ಏಷ್ಯಾದ ಅತಿ ಅಗಲವಾದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.* ಇದು ಮೊಕಾಮಾದ ಆಂತಾ ಘಾಟ್ ಮತ್ತು ಬೇಗುಸರೈನ ಸಿಮಾರಿಯಾ ನಡುವೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ರಾಷ್ಟ್ರೀಯ ಹೆದ್ದಾರಿ 31ರ ಭಾಗವಾಗಿದೆ.* 34 ಮೀಟರ್ ಅಗಲ ಮತ್ತು 1.86 ಕಿ.ಮೀ ಉದ್ದದ ಈ ಸೇತುವೆ, ಸಾಮಾನ್ಯ ಸೇತುವೆಗಳಿಗಿಂತ 4.5 ಮೀ. ಅಗಲವಾಗಿದೆ. ಇದು ಕೇಬಲ್ ಆಧಾರ ಹೊಂದಿದ್ದು, 1,871 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.* ಹಳೆಯ ರಾಜೇಂದರಾ ಸೇತುವೆಯಲ್ಲಿ ಭಾರವಾದ ವಾಹನಗಳ ಸಂಚಾರ ನಿಷೇಧಿತವಾಗಿದ್ದರೆ, ಹೊಸ ಸೇತುವೆಯಿಂದ ನೇರ ಸಂಪರ್ಕ ಸಾಧ್ಯವಾಗುತ್ತದೆ. ಇದರಿಂದಾಗಿ ವಾಹನಗಳು 100 ಕಿ.ಮೀ. ಸುತ್ತಿಬಳಸಿ ಬರುವ ಅವಶ್ಯಕತೆ ತಪ್ಪುತ್ತದೆ.* ಹೊಸ ಸೇತುವೆ ವ್ಯಾಪಾರ, ಕೃಷಿ ಮತ್ತು ಕೈಗಾರಿಕೆಗೆ ಅನುಕೂಲವಾಗುವ ನಿರೀಕ್ಷೆಯಿದ್ದು, ವಾಹನ ದಟ್ಟಣೆ ಕಡಿಮೆಯಾಗಲು ಸಹಾಯಕವಾಗಲಿದೆ.