* ಗಡಿ ಭದ್ರತಾ ಪಡೆ (BSF Chief)ಯ ದಲ್ಜಿತ್‌ ಸಿಂಗ್‌ ಚೌಧರಿ ಅವರು ನೂತನ ಮಹಾನಿರ್ದೇಶಕರಾಗಿ  ನೇಮಕಗೊಂಡಿದ್ದಾರೆ. * ಉತ್ತರಪ್ರದೇಶ ಕೇಡರ್‌ನ 1990  ಬ್ಯಾಚ್‌ನ ಐಪಿಎಸ್ ಅಧಿಕಾರಿ ದಲ್ಜಿತ್‌ ಸಿಂಗ್‌ ಚೌಧರಿ ಅವರು ಪ್ರಸ್ತುತ ಸಶಸ್ತ್ರ ಸೀಮಾ ಬಲ(SSB) ಮುಖ್ಯಸ್ಥರಾಗಿ ಕಾರ್ಯ ನಿರ್ಹಿಸುತ್ತಿದ್ದರು. * ಬಿಎಸ್‌ಎಫ್ ಡಿಜಿ ನಿತಿನ್ ಅಗರವಾಲ್ ಅವರನ್ನು ಕೇರಳ ರಾಜ್ಯ ಕೇಡರ್‌ಗೆ ವಾಪಸಾತಿ ಮಾಡಿದ ಒಂದು ದಿನದ ನಂತರ ಈ ಕ್ರಮವು ಬಂದಿದೆ.* ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ ನಿತಿನ್ ಅಗರ್ವಾಲ್ ಅವರು ಮತ್ತು ಉಪ ವಿಶೇಷ ಮಹಾನಿರ್ದೇಶಕ (ಪಶ್ಚಿಮ) ವೈ.ಬಿ.ಖುರಾನಿಯಾ ಅವರ ಸ್ಥಾನಕ್ಕೆ ದಲ್ಜಿತ್‌ ಸಿಂಗ್‌ ಚೌಧರಿ ಅವರನ್ನು ನೇಮಿಸಲಾಗಿದೆ.* ಕೇಂದ್ರವು 1990 ರ ಐಪಿಎಸ್ ಅಧಿಕಾರಿ ಯೋಗೇಶ್ ಖುರಾನಿಯಾ ಅವರನ್ನು ಅವರ ಒಡಿಶಾ ಕೇಡರ್‌ಗೆ ವಾಪಸ್ ಕಳುಹಿಸಿದ್ದು, ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಿಸಲಾಗಿದೆ.* ಚೌಧರಿ ಅವರು 2017 ರಿಂದ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ನಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ SDG ಆಗಿ ಕೇಂದ್ರೀಯ ನಿಯೋಜನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.