* ಬಿಎಂಟಿಸಿಗೆ ಹೊಸದಾಗಿ ಟಾಟಾ ಕಂಪನಿಯಿಂದ 148 ಎಲೆಕ್ಟ್ರಿಕ್ ಬಸ್ಗಳು ಸೇರಿವೆ. ಜುಲೈ 12 ರಂದು ಶಾಂತಿನಗರದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶವಿದೆ.* ಈ ಬಸ್ಗಳು 41.1 ಪೈಸೆ/ಕಿ.ಮೀ. ಗುತ್ತಿಗೆ ಆಧಾರದಲ್ಲಿ ಸಂಚರಿಸಲಿದೆ. 30 ಬಿಎಂಟಿಸಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿರುವ ಈ ಬಸ್ಗಳು 12 ವರ್ಷಗಳ ಸೇವಾ ಅವಧಿ ಹೊಂದಿವೆ.* ಡ್ರೈವರ್ಗಳು ಖಾಸಗಿ ಕಂಪನಿಯಿಂದ ನಿಯೋಜನೆ ಆಗಲಿದ್ದು, ಕಂಡಕ್ಟರ್ಗಳನ್ನು ಬಿಎಂಟಿಸಿ ನೇಮಿಸಲಿದೆ.* 12 ಮೀ ಉದ್ದದ ಬಸ್ಗಳು ಎಸಿ ಇಲ್ಲದ ಎಲೆಕ್ಟ್ರಿಕ್ ಬಸ್ಗಳಾಗಿದ್ದು, 200 ಕಿ.ಮೀ ಚಾರ್ಜ್ ಬೆನ್ನು ಹತ್ತಿ ಸಂಚರಿಸಬಲ್ಲವು. ಬಸ್ನಲ್ಲಿ 35 ಆಸನಗಳು ಮತ್ತು 1 ಗಾಲಿ ಕುರ್ಚಿಗೆ ಅವಕಾಶವಿದೆ. ಮಹಿಳಾ ಭದ್ರತೆಗಾಗಿ 10 ಪ್ಯಾನಿಕ್ ಬಟನ್ಗಳು ಹಾಗೂ 4 ಕ್ಯಾಮೆರಾಗಳು ಅಳವಡಿಸಲಾಗಿದೆ.* ಬಸ್ನಲ್ಲಿ 4 ಎಲ್.ಇ.ಡಿ ಬೋರ್ಡುಗಳು, ಧ್ವನಿ ಪ್ರಕಟಣಾ ವ್ಯವಸ್ಥೆ, ಅಗ್ನಿ ಪತ್ತೆ ವ್ಯವಸ್ಥೆ (FDAS), ಜಿಪಿಎಸ್ ನಿಗಾವ್ಯವಸ್ಥೆ ಇದೆ. ಹಿರಿಯ ನಾಗರಿಕರು, ವಿಕಲಾಂಗರು ಸುಲಭವಾಗಿ ಹೋಗಲು ಬಸ್ ಬಾಗುವ ವ್ಯವಸ್ಥೆ ಮತ್ತು ನಿಲುಗಡೆ ಬಟನ್ಗಳೂ ಅಳವಡಿಸಲಾಗಿದೆ.* ಈ ಸೇರ್ಪಡೆ ಜೊತೆಗೆ ಬಿಎಂಟಿಸಿಯ ಒಟ್ಟು ಬಸ್ ಸಂಖ್ಯೆ 7,048ಕ್ಕೆ ಏರಿದೆ. ಎಲ್ಲ 148 ಬಸ್ಗಳು ಘಟಕ-04 (ಜಯನಗರ) ಡಿಪೋ ಮೂಲಕ ಸಂಚರಿಸಲಿವೆ.