* ಬಿಬಿಎಂಪಿ ವತಿಯಿಂದ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಎರಡು ಸಂಚಾರಿ ಪ್ರಯೋಗಾಲಯ ವಾಹನಗಳನ್ನು ಖರೀದಿಸಿದ್ದು, ಫೆಬ್ರುವರಿ 20 ರಂದು (ಗುರುವಾರ) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಹನಗಳಿಗೆ ಚಾಲನೆ ನೀಡಿದರು.* ಬಿಬಿಎಂಪಿಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಲು ಹೆಚ್ಚು ಅನುಕೂಲಕರವಾಗಿರುವ ನಿಟ್ಟಿನಲ್ಲಿ 2 ಸಂಚಾರಿ ಪ್ರಯೋಗಾಲಯ ವಾಹನಗಳು ಕಾರ್ಯನಿರ್ವಹಿಸಲಿವೆ. 2 ವಾಹನಗಳಿಗಾಗಿ 38.50 ಲಕ್ಷ ರೂ. ವ್ಯಯಿಸಿದ್ದು, ಗುಣಮಟ್ಟ ಪರೀಕ್ಷಿಸುವ ಉಪಕರಣಗಳಿಗೆ 11.40 ಲಕ್ಷ ರೂ. ಸೇರಿದಂತೆ 49.90 ಲಕ್ಷ ರೂ. ವ್ಯಯಿಸಲಾಗಿದೆ.* ಒಂದು ಸಂಚಾರಿ ಪ್ರಯೋಗಾಲಯದ ವಾಹನದಲ್ಲಿ ಚಾಲಕ ಲ್ಯಾಬ್ ಟೆಕ್ನಿಷಿಯನ್ ಲ್ಯಾಬ್ ಸಹಾಯಕ ಸೇರಿ ಮೂರು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಬಿಟುಮಿನ್ ಮಾದರಿ ಕಾಬುಲ್ ಸ್ಟೋನ್ ಕಬ್ಬಿಣ ಅಗ್ರಿಗೇಟ್ಸ್ ಕಾಂಕ್ರೀಟ್ ಮಾದರಿ ತಾಪಮಾನ ಪರಿಶೀಲಿಸುವ ಉಪಕರಣ ಕೋರ್ ಕಟ್ಟಿಂಗ್ ಯಂತ್ರ ತೂಕ ಮಾಡುವ ಯಂತ್ರ ಸೇರಿದಂತೆ 16 ಉಪಕರಣಗಳು ಇವೆ. * ಎರಡೂ ವಾಹನಗಳು ಗುಣ ನಿಯಂತ್ರಣ ವಿಭಾಗದಿಂದ ಕಾರ್ಯಾಚರಣೆ ಮಾಡಲಿದ್ದು ಎಂಟೂ ವಲಯಗಳಲ್ಲಿ ಕಾಮಗಾರಿ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಸಂಚಾರಿ ಪ್ರಯೋಗಾಲಯದ ವಾಹನಗಳ ಸುರಕ್ಷತೆಯ ಹಿತದೃಷ್ಟಿಯಿಂದ ಅಗ್ನಿನಂದಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದು ಗುಣ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.* ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗಾಗಿ ಉಪಯೋಗಿಸುವ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಲಾಗುವುದು. ಸಂಚಾರಿ ವಾಹನದಲ್ಲಿ ಬಿಟುಮಿನ್ ಮಾದರಿ, ಕಾಬುಲ್ ಸ್ಟೋನ್, ಕಬ್ಬಿಣ, ಅಗ್ರಿಗೇಟ್ಸ್, ಕಾಂಕ್ರೀಟ್ ಮಾದರಿ, ತಾಪಮಾನ ಪರಿಶೀಲಿಸುವ ಉಪಕರಣ, ಕೋರ್ ಕಟ್ಟಿಂಗ್ ಯಂತ್ರ, ತೂಕ ಮಾಡುವ ಯಂತ್ರ ಸೇರಿದಂತೆ 16 ಉಪಕರಣಗಳು ಇರಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.