* ಭಯೋತ್ಪಾದನೆ ನಿಯಂತ್ರಣಕ್ಕೆ ಸಂಬಂಧಿಸಿದ ವಿಶ್ವ ಭದ್ರತಾ ಮಂಡಳಿಯ ಸಮಿತಿಯ ನಾಯಕತ್ವಕ್ಕೆ ಸಂಬಂಧಪಟ್ಟ ಗೊಂದಲಕ್ಕೆ ತೆರೆಬಿದ್ದಿದೆ.* ಇದೀಗ ಅಸ್ಟ್ರಿಯಾ ಶಾಂತಿಯುತ ನಿರ್ಬಂಧ ಸಮಿತಿಯ ಅಧ್ಯಕ್ಷರಾಗಿದ್ದು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಯಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ.* ಜಾಗತಿಕ ಭದ್ರತಾ ಮಂಡಳಿಗೆ ಒಳಪಡುವ ಪ್ರಭಾವಿ ಭಯೋತ್ಪಾದನೆ ನಿಗ್ರಹ ಸಮಿತಿಯ ನಾಯಕತ್ವವನ್ನು ಇದೀಗ ಡೆನ್ಮಾರ್ಕ್ ವಹಿಸಿಕೊಂಡಿದೆ ಎಂದು ಐಎಎನ್ಎಸ್ ಬುಧವಾರ(ಜೂನ್ 4) ವರದಿ ಮಾಡಿದೆ.* ಈ ಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ಐದು ತಿಂಗಳು ಗೊಂದಲ ಸೃಷ್ಟಿಸಿದ್ದ ಪಾಕಿಸ್ತಾನವನ್ನು ಇದೀಗ ಸಂಪೂರ್ಣವಾಗಿ ಸಮಿತಿಯಿಂದ ಹೊರಗಿಡಲಾಗಿದೆ.* 2020ರಿಂದ 2022ರವರೆಗೆ ಭಾರತ ಈ ಭಯೋತ್ಪಾದನೆ ನಿಗ್ರಹ ಸಮಿತಿಗೆ ನೇತೃತ್ವ ನೀಡಿತ್ತು.