* ಭಾರತದಲ್ಲಿ ಶೇ.76ರಷ್ಟು ಜನರು ಎಐ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ಸ್ವೀಕರಿಸಲು ಸಿದ್ಧರಾಗಿದ್ದು, ಕೃತಕ ಬುದ್ಧಿಮತ್ತೆ ಬಗ್ಗೆ ಆಶಾವಾದ ಹೊಂದಿದ್ದಾರೆ ಎಂದು ಬಾಷ್ ಟೆಕ್ ಕಂಪಾಸ್ ವರದಿ ತಿಳಿಸಿದೆ.* ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಬ್ರಿಟನ್ ಮತ್ತು ಅಮೆರಿಕ ದೇಶಗಳಲ್ಲಿ ನಡೆದ ಸಮೀಕ್ಷೆಯಲ್ಲಿ, ಶೇ.64ರಷ್ಟು ಭಾಗವಹಿಸಿದ್ದವರು ಎಐ ಅನ್ನು ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನವೆಂದು ಅಭಿಪ್ರಾಯಪಟ್ಟಿದ್ದಾರೆ.* ಶೇ.90ರಷ್ಟು ಭಾರತೀಯರು ಈಗಾಗಲೇ ಎಐ ಬಳಕೆಯಲ್ಲಿ ಮುಂಚೂಣಿಯಲ್ಲಿ ಇದ್ದು, ಶೇ.76ರಷ್ಟು ಜನರು ಇದಕ್ಕೆ ನಂಬಿಕೆ ಹೊಂದಿದ್ದಾರೆ.* ಜಾಗತಿಕ ಸರಾಸರಿಯಂತೆ ಹೋಲಿದರೆ, ಭಾರತದಲ್ಲಿ ಎಐ ಬಳಕೆದಾರರ ವಿಶ್ವಾಸ ಶೇ.46ರಷ್ಟು ಹೆಚ್ಚು ಇದ್ದು, ವಿಶ್ವದಲ್ಲಿ ಅತ್ಯಂತ ವಿಶ್ವಾಸದೊಂದಿಗೆ ಎಐ ಬಳಕೆಯಾಗುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* ದೈನಂದಿನ ಜೀವನದಲ್ಲಿ ಎಐ ತಂತ್ರಜ್ಞಾನ ಬಳಸುವ ಆಸಕ್ತಿ ಭಾರತೀಯರಲ್ಲಿ ಹೆಚ್ಚು ಕಂಡುಬರುತ್ತಿದ್ದು, ಶೇ.70ರಷ್ಟು ಮಂದಿ ಎಐ ಚಾಟ್ಬಾಟ್ಗಳನ್ನು ನಂಬುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.* ವೃತ್ತಿಜೀವನದಲ್ಲಿ ಶೇ.73ರಷ್ಟು ಭಾರತೀಯರು ಎಐ ಉಪಯೋಗಿಸುತ್ತಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.